ರಾಜಸ್ಥಾನ : ರಾಜಸ್ಥಾನದ ಪೊಲೀಸ್ ಇಲಾಖೆಯ ಕನಿಷ್ಠ 50 ಮಂದಿ ಲೈಂಗಿಕ ಅಪರಾಧಗಳಲ್ಲಿ ಶಾಮೀಲಾಗಿರುವುದು ಸಾಬೀತಾಗಿದೆ ಎಂದು ತನಿಖಾ ವರದಿಯಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ರಾಜ್ಯ ಹಿರಿಯ ಪೊಲೀಸ್ ಮಹಾ ವರಿಷ್ಠರು ಆದೇಶಿಸಿದ್ದರು.
ಇತ್ತೀಚಿನ ತಿಂಗಳುಗಳಲ್ಲಿ ರಾಜಸ್ಥಾನ ಪೊಲೀಸ್ ಇಲಾಖೆ ಸಿಬ್ಬಂದಿಗಳಿಂದ ಭ್ರಷ್ಟಾಚಾರ ಮತ್ತು ನೈತಿಕ ಪ್ರಕ್ಷುಬ್ಧತೆಯ ಹಲವಾರು ಘಟನೆಗಳು ಬಯಲಾಗುತ್ತಿದ್ದು, ಪೊಲೀಸ್ ಇಲಾಖೆ ಮುಜುಗರ ಅನುಭವಿಸುವಂತಾಗಿದೆ
ರಾಜ್ಯದ ಸುಮಾರು 50 ಪೊಲೀಸ್ ಅಧಿಕಾರಿಗಳು ವಿವಿಧ ಲೈಂಗಿಕ ಅಪರಾಧಗಳಲ್ಲಿ ಭಾಗಿಯಾಗಿದ್ದರೆ, 400 ಕ್ಕೂ ಹೆಚ್ಚು ಮಂದಿ ಪೊಲೀಸರು ಲಂಚ ಸೇರಿದಂತೆ ಇತರ ಸಂಶಯಾಸ್ಪದ ಚಟುವಟಿಕೆಗಳಲ್ಲಿ ತೊಡಗಿರುವುದು ಪತ್ತೆಯಾಗಿದೆ