News Karnataka Kannada
Monday, April 29 2024
ಮಂಗಳೂರು

ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ಪಟ್ಲ ಫೌಂಡೇಶನ್ ಟ್ರಸ್ಟ್‌ನಿಂದ ಕಲಾವಿದರಿಗೆ ೫೦ ಸಾವಿರ ರೂ ಸಹಾಯಧನ

New Project 2021 11 12t134159.829
Photo Credit :

ಮಂಗಳೂರು : ಯಕ್ಷದ್ರುವ ಪಟ್ಲ ಫೌಂಡೇಶನ್(ರಿ) ಮಂಗಳೂರು, ಅಡ್ಯಾರು ಶ್ರೀ ವೀರಾಂಜನೇಯ ಸ್ವಾಮಿ ಮಂದಿರದ ಆಡಳಿತ ಸಮಿತಿ ಹಾಗೂ ಅಡ್ಯಾರು ಗ್ರಾಮದ ನಾಗರಿಕರಿಂದ ಸ್ಯಾಂಡಲ್ ವುಡ್ ನ ನಾಯಕ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಇವರಿಗೆ ನುಡಿ ನಮನದ ಶ್ರದ್ಧಾಂಜಲಿ ಕಾರ್ಯಕ್ರಮ ಅಡ್ಯಾರ್ ಶ್ರೀ ವೀರಾಂಜನೇಯ ಸ್ವಾಮಿ ಮಂದಿರದಲ್ಲಿ ಜರಗಿತು.
ಅಡ್ಯಾರು ಶ್ರೀ ವೀರಾಂಜನೇಯ ಸ್ವಾಮಿ ಮಂದಿರದ ಕೀರ್ತಿಶೇಷ ರಾಮಣ್ಣ ನಾಕ್  ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ ಮಾತನಾಡಿ ತನ್ನ ಪ್ರಬುದ್ಧ ನಟನೆಯಿಂದಾಗಿ ಜನಮಾನಸದಲ್ಲಿ ಮನೆ ಮಾತಾಗಿದ್ದ ಪುನೀತ್ ರಾಜ್‌ಕುಮಾರ್ ಶ್ರೇಷ್ಠ ಕಲಾವಿದ, ಮಾತ್ರವಲ್ಲದೆ  ಹೃದಯವಂತನಾಗಿ,  ಸರಳ ನಡೆ ನುಡಿಯಿಂದ, ಸಮಾಜಮುಖಿ ಕಾರ್ಯಗಳಿಂದಾಗಿ, ಕನ್ನಡಿಗರ ಪ್ರೀತಿಯ ಅಪ್ಪುವಾಗಿ, “ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ “ಎಂಬಂತೆ ಜನಪರ  ಕಾರ್ಯಯೋಜನೆಗಳ ಮುಖಾಂತರ ಸಹಸ್ರಾರು ಕುಟುಂಬಗಳ ನಂದಾದೀಪವಾಗಿ ಬೆಳಗಿದವರು. ಆದರೆ ಆ ನಂದಾದೀಪ ಆರಿ ಹೋಗಿ ಚಿತ್ರೋದ್ಯಮಕ್ಕೆ ಮಾತ್ರವಲ್ಲದೆ ಸಮಸ್ತ ಕನ್ನಡಾಭಿಮಾನಿಗಳಿಗೆ, ಕಲಾಭಿಮಾನಿಗಳಿಗೆ ಮರೆಯಲಾಗದ ನೋವನ್ನು ಉಂಟು ಮಾಡಿದೆ ಎಂದರು.
ಪುನೀತ್‌ರವರ ಕುಟಂಬದೊಂದಿಗೆ ನಿಕಟ ಸಂಪರ್ಕ ಸಂಬಂಧವನ್ನು ಮೆಲುಕು ಹಾಕಿದ ಪಟ್ಲರು ಕೆಲ ದಿನಗಳ ಹಿಂದೆ ಪುನೀತ್‌ರವರೊಡನೆ ಕಳೆದ ಕ್ಷಣಗಳನ್ನು ನೆನೆದು ಗದ್ಗತಿತರಾದರು. ಪುನೀತ್ ಸ್ಮರಣಾರ್ಥವಾಗಿ ಯಕ್ಷಗಾನ ಕ್ಷೇತ್ರದಲ್ಲಿ ಕಳೆದ  ೪೦ ವರ್ಷಗಳಿಂದ  ನೇಪಥ್ಯ ಕಲಾವಿದರಾಗಿ(ರಂಗಸ್ಥಳದ ಗುಂಡಿ ತೆಗೆಯುತ್ತಾ, ರಂಗಸ್ಥಳದಲ್ಲಿ ತೆರೆದೊಂದಿ ಹಿಡಿಯುತ್ತಾ ಕರ್ತವ್ಯ ನಿರ್ವಹಿಸಿದ ಬಡ ಕುಟುಂಬದ) ಕಲಾವಿದ  ರಘು ನಾಳರವರ ಮಗಳ ಮದುವೆಗಾಗಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ವತಿಯಿಂದ ೫೦ ಸಾವಿರ  ರೂಪಾಯಿಗಳ ಸಹಾಯಧನವನ್ನು ಕರ್ನಾಟಕ ರಾಜ್ಯ ಬಸ್ ಮಾಲಕರ ಸಂಘದ ಅಧ್ಯಕ್ಷರಾದ ರಾಜವರ್ಮ ಬಲ್ಲಾಳ್‌ರವರು ಗೌರವಪೂರ್ವಕವಾಗಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ೫೦ ಜನ ಅಡ್ಯಾರು ಗ್ರಾಮದ ಗ್ರಾಮಸ್ಥರು ನೇತ್ರದಾನವನ್ನು ಮಾಡುವ ಸಂಕಲ್ಪವನ್ನು ಕೈಗೊಂಡರು. ಮಂದಿರದ ಆಡಳಿತ ಸಮಿತಿಯ ಅಧ್ಯಕ್ಷ ರಮೇಶ್ ತುಂಬೆ, ದ.ಕ ಜಿಲ್ಲಾ ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ ಜಯಶೀಲ ಅಡ್ಯಂತಾಯ , ರೋಟರಿ ಕ್ಲಬ್ ಫರಂಗಿಪೇಟೆಯ ಅಧ್ಯಕ್ಷ ರೊ| ಸುರೇಂದ್ರ ಕಂಬಳಿ ನುಡಿನಮನ ಸಲ್ಲಿಸಿದರು. ಮಂದಿರದ ಗೌರವಾಧ್ಯಕ್ಷ ಎ. ದಿವಾಕರ್ ನಾಕ್, ಎ. ಮಾಧವ ನಾಕ್, ಶಿವರಾಜ್ ಶೆಟ್ಟಿ, ಪಟ್ಲ ಟ್ರಸ್ಟ್‌ನ ಕೋಶಾಧಿಕಾರಿ ಸುದೇಶ್ ಕುಮಾರ್ ರೈ, ಅಶ್ವಿಥ್ ಶೆಟ್ಟಿ , ಹರ್ಷ ಕುಮಾರ್ ಶೆಟ್ಟಿ, ರತ್ನಾಕರ ಅಮೀನ್, ದೇವಿ ಕಿರಣ್ ಶೆಟ್ಟಿ, ಪ್ರದೀಪ್ ಕುಮಾರ್ ಶೆಟ್ಟಿ, ಇಂದಿರಾ ಶೆಟ್ಟಿ, ಪದ್ಮಜ ಭಂಡಾರಿ, ಮೋಹಿನಿ ಶಂಕರ್, ಶಕಿಲಾ ಎಂ ನಾಕ್, ರಾಜ್‌ಕುಮಾರ್  ನಾಕ್  ,  ಪ್ರವೀಣ್ ಕುಮಾರ್,  ಅಜಿತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಪಟ್ಲ ಫೌಂಡೇಶನ್ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರು ಕಾರ್ಯಕ್ರಮ ನಿರ್ವಹಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು