News Karnataka Kannada
Sunday, May 19 2024
ದೇಶ

ಈ ಬ್ಯಾಗಿನ ಬೆಲೆ ಕೇಳಿದ್ರೆ ನಿಜಕ್ಕೂ ಶಾಕ್​ ಆಗ್ತೀರಾ

Photo Credit : News Kannada

ಸಾಮಾನ್ಯವಾಗಿ ಪುಡ್​​ ಆರ್ಡರ್​​ ಮಾಡಿದಂತಹ ಸಂದರ್ಭದಲ್ಲಿ ಪೇಪರ್​​ ಬ್ಯಾಗ್​​​ಗಳಲ್ಲಿ ಪ್ಯಾಕ್​​ ಮಾಡಿ ಕೊಡುವುದನ್ನು ನೋಡಿರಬಹುದು. ಆದರೆ ಈ ಮಾತ್ರ ಬ್ಯಾಗ್​​ ನೋಡಿರಲು ಸಾಧ್ಯ ಇಲ್ಲ. ಈ ಬ್ಯಾಗ್​​​​ ಬೆಲೆ ಕೇಳಿದ್ರೆ ಖಂಡಿತ ಶಾಕ್‌ ಆಗ್ತೀರಾ. ಅಷ್ಟಕ್ಕೂ ಈ ಬ್ಯಾಗಿನ ಬೆಲೆ 2,80,000 ರೂ. ಈ ಚೀಲದ ಬೆಲೆ ಸುಮಾರು ರೂ. 3 ಲಕ್ಷ. ಐಷಾರಾಮಿ ಫ್ಯಾಷನ್ ಕಂಪನಿ ಲೂಯಿಸ್​​ ವಿಟಾನ್ ತಯಾರಿಸಿದ ಈ ಬ್ಯಾಗ್ ಇದೀಗಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ.ಈ ಸಿಂಪಲ್​​ ಬ್ಯಾಗ್​​​​ ನ ವಿಶೇಷತೆಯೇನು ಎಂಬುದರ ಬಗ್ಗೆ ತಿಳಿಯೋಣ…

ಐಕಾನಿಕ್ ಫ್ರೆಂಚ್ ಬ್ರ್ಯಾಂಡ್ ಲೂಯಿಸ್ ವಿಟಾನ್ ಹಸುವಿನ ಚರ್ಮದಿಂದ ತಯಾರಿಸಿದ ಈ ಬ್ಯಾಗ್​​​ ಅನ್ನು ಜನವರಿ 4 ರಂದು ಬಿಡುಗಡೆ ಮಾಡಿದೆ. ಈ ಬ್ಯಾಗ್‌ ಅನ್ನು “ಸ್ಯಾಂಡ್‌ವಿಚ್ ಬ್ಯಾಗ್” ಎಂದು ಕರೆಯಲಾಗುತ್ತದೆ.. ಲೂಯಿ ವಿಟಾನ್‌ನ ಪುರುಷರ ಕ್ರಿಯೇಟಿವ್​​​​ ನಿರ್ದೇಶಕರಾದ ಫಾರೆಲ್ ವಿಲಿಯಮ್ಸ್ ಈ ಸ್ಯಾಂಡ್‌ವಿಚ್ ಬ್ಯಾಗ್ ಅನ್ನು ತಯಾರಿಸಿದ್ದಾರೆ. ಈ ಚೀಲದ ಉದ್ದ ಕೇವಲ 30 ಸೆಂ.ಮೀ, ಎತ್ತರ 27 ಸೆಂ.ಮೀ ಮತ್ತು ಅಗಲ 17 ಸೆಂ.ಮೀ ಇದೆ. ಬ್ಯಾಗ್​​ ಒಳಗೆ ಜಿಪ್ ಮಾಡಿದ ಪಾಕೆಟ್ ಮತ್ತು ಡಬಲ್ ಫ್ಲಾಟ್ ಪಾಕೆಟ್ ಅನ್ನು ಒದಗಿಸಲಾಗಿದೆ. ಸದ್ಯ ಈ ಬ್ಯಾಗ್‌ನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್​​ ‌ಆಗುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು