ಪಾಕಿಸ್ತಾನದ ಸ್ಟಾರ್ ವೇಗದ ಬೌಲರ್ ಹ್ಯಾರಿಸ್ ರೌಫ್ ಅಂತರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾಗುವ ಸುದ್ದಿ ಹರದಾಡುತ್ತಿದೆ. ಇತ್ತೀಚಿಗೆ ಪಾಕ್ ಆಸ್ಟ್ರೇಲಿಯಾ ಪ್ರವಾಸವನ್ನು ಬೆಳೆಸಿತ್ತು. ಈ ವೇಳೆ ಮೂರು ಟೆಸ್ಟ್ ಪಂದ್ಯಗಳನ್ನು ಆಡಿತ್ತು. ಈ ಸರಣಿಯಿಂದ ಹ್ಯಾರಿಸ್ ರೌಫ್ ತಮ್ಮ ಹೆಸರನ್ನು ಹಿಂತೆಗೆದುಕೊಂಡಿದ್ದರು. ಮತ್ತು ನಂತರ ಬಿಗ್ ಬ್ಯಾಷ್ ಲೀಗ್ ಆಡುತ್ತಿದ್ದರು. ಟೆಸ್ಟ್ ಸರಣಿಯಿಂದ ತಮ್ಮ ಹೆಸರನ್ನು ಹಿಂಪಡೆದ ನಂತರ, ರೌಫ್ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯಿತು.
ಪಾಕಿಸ್ತಾನ ತಂಡದ ನಿರ್ದೇಶಕ ಮೊಹಮ್ಮದ್ ಹಫೀಜ್ ಮತ್ತು ಮುಖ್ಯ ಆಯ್ಕೆಗಾರ ವಹಾಬ್ ರಿಯಾಜ್ ಕೆಲವು ದಿನಗಳ ಹಿಂದೆ ಹ್ಯಾರಿಸ್ ರೌಫ್’ಗೆ ಛೀಮಾರಿ ಹಾಕಿದ್ದರು. ಇನ್ನೊಂದೆಡೆ, ರೌಫ್ ಟಿ20ಯಲ್ಲಿ ಆಡಲು ಸಿದ್ಧರಾಗಿದ್ದರೂ ಸಹ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತು ಅಧಿಕಾರಿಗಳು ಅವರನ್ನು ಪರಿಗಣಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ.
30 ವರ್ಷದ ಹ್ಯಾರಿಸ್ ರೌಫ್ ಅಂತರಾಷ್ಟ್ರೀಯ ಕ್ರಿಕೆಟ್’ಗೆ ವಿದಾಯ ಹೇಳಬಹುದು ಎಂದು ಹೇಳಲಾಗುತ್ತಿದೆ.