News Karnataka Kannada
Monday, April 29 2024
ದೇಶ

ಅಮಿತ್ ಶಾ ಉಪಸ್ಥಿತಿಯಲ್ಲಿ1.40 ಲಕ್ಷ ಕೆ.ಜಿ ಮಾದಕ ದ್ರವ್ಯ ನಾಶ

drugs destroyed
Photo Credit : News Kannada

ವದೆಹಲಿ: ವರ್ಚುವಲ್ ಆಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಉಪಸ್ಥಿತಿಯಲ್ಲಿ ಇಂದು ದೇಶದ ವಿವಿಧ ಭಾಗಗಳಲ್ಲಿ ₹2,381ಕೋಟಿ ಮೌಲ್ಯದ 1.40 ಲಕ್ಷ ಕೆಜಿಗೂ ಹೆಚ್ಚು ಮಾದಕ ದ್ರವ್ಯವನ್ನು ನಾಶಪಡಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಡ್ರಗ್ಸ್ ಸ್ಮಗ್ಲಿಂಗ್ ಮತ್ತು ನ್ಯಾಷನಲ್ ಸೆಕ್ಯುರಿಟಿ’ ಕುರಿತ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಶಾ ಅವರು ನವದೆಹಲಿಯಿಂದ ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ವೀಕ್ಷಿಸುತ್ತಿದ್ದಾಗಲೇ ಮಾದಕ ವಸ್ತುಗಳನ್ನು ನಾಶ ಮಾಡಲಾಯಿತು. ಇದರಲ್ಲಿ ಬಹುಪಾಲು ಮಧ್ಯಪ್ರದೇಶದ್ದಾಗಿತ್ತು.

ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೊ (ಎನ್‌ಸಿಬಿ) ಹೈದರಾಬಾದ್ ಘಟಕವು ವಶಪಡಿಸಿಕೊಂಡ 6,590 ಕೆಜಿ ಮಾದಕವಸ್ತು, ಇಂದೋರ್ ಘಟಕದ ವಶಪಡಿಸಿಕೊಂಡ 822 ಕೆಜಿ ಮತ್ತು ಜಮ್ಮು ಘಟಕದಿಂದ ವಶಪಡಿಸಿಕೊಳ್ಳಲಾಗಿದ್ದ 356 ಕೆಜಿ ಮಾದಕ ವಸ್ತುವನ್ನು ನಾಶಪಡಿಸಲಾಯಿತು. ಸೋಮವಾರದ ನಾಶಪಡಿಸಲಾದ ಮಾದಕ ದ್ರವ್ಯ ಸೇರಿ ಕೇವಲ ಒಂದು ವರ್ಷದಲ್ಲಿ ದೇಶದಾದ್ಯಂತ ನಾಶಪಡಿಸಲಾದ ಒಟ್ಟು ಪ್ರಮಾಣವು ಸುಮಾರು 10 ಲಕ್ಷ ಕಿಲೋಗ್ರಾಂಗೆ ತಲುಪಿದ್ದು, ಇದರ ಮೌಲ್ಯ ₹12,000 ಕೋಟಿ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು