News Karnataka Kannada
Friday, April 12 2024
Cricket
ಮಂಗಳೂರು

ನಿಯಾಶಾ ಆಯುರ್ವೇದ ಆರೋಗ್ಯ, ಕ್ಷೇಮ ಮಾನ್ಸೂನ್ ಥೆರಪಿ ಆರಂಭ

Niyesha Ayurveda Health, Wellness Monsoon Therapy Launched
Photo Credit : News Kannada

ಮಂಗಳೂರು: ನಿಯಾಶಾ ಆಯುರ್ವೇದ ಆರೋಗ್ಯ ಮತ್ತು ಸ್ವಾಸ್ಥ್ಯ (ಯೆನೆಪೋಯ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಘಟಕ) ಕೇಂದ್ರದಲ್ಲಿ ಜುಲೈ 16, 2023 ರಂದು ವಿಶೇಷ ಪಂಚಕರ್ಮ ಚಿಕಿತ್ಸಾ ಮಾನ್ಸೂನ್ ಥೆರಪಿ ಆರಂಭಗೊಂಡಿತು.

ಯೂನಿಟಿ ಕೇರ್ ಮತ್ತು ಹೆಲ್ತ್ ಸರ್ವಿಸಸ್ ಮತ್ತು ಯೂನಿಟಿ ಅಕಾಡೆಮಿ ಆಫ್ ಎಜುಕೇಶನ್‌ನ ಅಧ್ಯಕ್ಷ ಮತ್ತು ವೈದ್ಯಕೀಯ ನಿರ್ದೇಶಕ ಡಾ. ಸಿ.ಪಿ ಹಬೀಬ್ ರಹಮಾನ್ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು. ಮಂಗಳೂರಿನ ಯೂನಿವರ್ಸಿಟಿ ಕಾಲೇಜು ನಿವೃತ್ತ ಸಿಬ್ಬಂದಿ ಅಮ್ಮಾಳು ಕುಟ್ಟಿ, ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್‌ ಆರ್ಟ್ಸ್ ಸೈನ್ಸ್ ಕೋಮರ್ಸ್ ಆಂಡ್ ಮ್ಯಾನೇಜ್ಮೆಂಟ್ ನ ಪ್ರಾಂಶುಪಾಲರಾದ ಡಾ. ಅರುಣ್ ಭಾಗವತ್ ಕಾರ್ಯಕ್ರಮದ ಗೌರವಾನ್ವಿತ ಅತಿಥಿಗಳಾಗಿದ್ದರು ಯೆನೆಪೋಯ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಲಕ್ಷ್ಮೀಶ್ ಉಪಾಧ್ಯ ಮತ್ತು ಯೆನೆಪೋಯ ಆಯುರ್ವೇದ ವೈದ್ಯಕೀಯ ಕಾಲೇಜಿನ ಸ್ವಸ್ಥ ವೃತ್ತ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ.ವೀರಾಜ್ ಹೆಗ್ಡೆ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನೆರವೇರಿತು.

ಡಾ.ಸಿ.ಪಿ. ಹಬೀಬ್ ರಹಮಾನ್ ಮಾತನಾಡಿ, ಮಾನ್ಸೂನ್ ಥೆರಪಿಯು ಹಿಂದಿನ ದಿನಗಳಲ್ಲಿ ಹೇಗೆ ವೈಯಕ್ತಿಯ ಆರೋಗ್ಯಕ್ಕೆ ಪೂರಕವಾಗುತ್ತಿತ್ತು ಎಂಬುದರ ಬಗ್ಗೆ ತಿಳಿಸಿಕೊಟ್ಟರು.

ಡಾ. ಅಮ್ಮಾಳು ಕುಟ್ಟಿ ಅವರು ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಂಡರು ಹಾಗು ಆರೋಗ್ಯವನ್ನು ಕಾಪಾಡಿಕೊಳ್ಳಲು ಮಾನ್ಸೂನ್ ಚಿಕಿತ್ಸೆಯನ್ನು ಹಾಗೂ ಆಯುರ್ವೇದವನ್ನು ಇನ್ನಷ್ಟು ಪ್ರಚಲಿತಗೊಳಿಸುವ ಅವಶ್ಯಕತೆಯಿದೆ ಎಂದರು.

ಡಾ.ಅರುಣ್ ಭಾಗವತ್ ಮಾತನಾಡಿ, ಇಂತಹ ವಿಶಿಷ್ಟ ಸಂಪ್ರದಾಯವನ್ನು ವೈಜ್ಞಾನಿಕವಾಗಿ ಮೌಲ್ಯೀಕರಿಸುವ ಮಹತ್ವದ ಕುರಿತು ತಿಳಿಸಿದರು. ಡಾ.ವೀರಜ್ ಹೆಗ್ಡೆ ಅವರು ‘ಮಾನ್ಸೂನ್ ಥೆರಪಿ’ಯ ಕುರಿತಾಗಿ ಮಾಹಿತಿ ನೀಡಿ, ಮಾನ್ಸೂನ್‌ನಲ್ಲಿ ಆರೋಗ್ಯವಂತರಾಗಿರಲು ಮಾಡಬೇಕಾದ ಮತ್ತು ಮಾಡಬಾರದ ವಿಷಯಗಳ ಕುರಿತಾಗಿ ಜಾಗೃತಿ ಮೂಡಿಸಿದರು.

ಡಾ.ವಿದ್ಯಾಪ್ರಭಾ ಆರ್ ವಂದಿಸಿದರು. ಕಾರ್ಯಕ್ರಮದ ನಂತರ ವಿಶೇಷ ಔಷಧೀಯ ಗಂಜಿ – ’ಕರ್ಕಿಟಕ ಗಂಜಿ’ಯನ್ನು ಸಭೆಗೆ ವಿತರಿಸಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು