News Karnataka Kannada
Monday, April 29 2024
ಒಡಿಸ್ಸಾ

ತಂದೆಯನ್ನು ಆಸ್ಪತ್ರೆಗೆ ಕರೆದೊಯ್ಯಲು 35 ಕೀ.ಮಿ ರಿಕ್ಷಾ ಪೆಡಲ್ ತುಳಿದ ಬಾಲಕಿ

Girl pedals 35-km rickshaw to take her father to hospital
Photo Credit : IANS

ಒಡಿಶಾ: ಭದ್ರಾಕ್ ಜಿಲ್ಲೆಯಲ್ಲಿ ಅಪ್ರಾಪ್ತ ಮಗಳು ಗಾಯಗೊಂಡ ತಂದೆಯನ್ನು ಆಸ್ಪತ್ರೆಗೆ ತಲುಪಲು ಸುಮಾರು 35 ಕಿ.ಮೀ ರಿಕ್ಷಾ ಟ್ರಾಲಿಯಲ್ಲಿ ತುಳಿದುಕೊಂಡು ಹೋಗಿದ್ದಾಳೆ.

ಈ ಘಟನೆ ಅ.23 ರಂದು ನಡೆದಿದ್ದು, ಗುರುವಾರ ಬಾಲಕಿ ತನ್ನ ತಂದೆಯೊಂದಿಗೆ ಆಸ್ಪತ್ರೆಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ಬೆಳಕಿಗೆ ಬಂದಿದೆ.

14 ವರ್ಷದ ಸುಜಾತಾ ಸೇಥಿ ಭದ್ರಾಕ್ ಜಿಲ್ಲೆಯ ನಾಡಿಗನ್ ಗ್ರಾಮದ ನಿವಾಸಿ. ಅಕ್ಟೋಬರ್ 22ರಂದು ಸುಜಾತಾ ತಂದೆ ಶಂಭುನಾಥ್ ಜಗಳದಲ್ಲಿ ಗಾಯಗೊಂಡಿದ್ದರು. ಅಕ್ಟೋಬರ್ 23 ರಂದು, ಸುಜಾತಾ ಗಾಯಗೊಂಡ ತಂದೆಯನ್ನು ರಿಕ್ಷಾ ಟ್ರಾಲಿಯಲ್ಲಿ 14 ಕಿ.ಮೀ ದೂರದಲ್ಲಿರುವ ಧಮ್ನಗರ್ ಆಸ್ಪತ್ರೆಗೆ ಕರೆದೊಯ್ದರು, ಆದರೆ ಅಲ್ಲಿನ ವೈದ್ಯರು ಉತ್ತಮ ಚಿಕಿತ್ಸೆಗಾಗಿ ತಂದೆಯನ್ನು ಭದ್ರಾಕ್ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲು ಸಲಹೆ ನೀಡಿದರು.

ಇದಾದ ನಂತರ, ಸುಜಾತಾ ಮತ್ತೆ ತನ್ನ ತಂದೆಯನ್ನು ರಿಕ್ಷಾದಲ್ಲಿ ಕುಳ್ಳಿರಿಸಿ 35 ಕಿ.ಮೀ ದೂರದಲ್ಲಿರುವ ಭದ್ರಾಕ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸದ್ಯ ಈ ಘಟನೆಯ ವಿಡಿಯೋ ವೈರಲ್‌ ಆಗ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು