ಒಡಿಶಾ: ಒಡಿಶಾದ ಸುದ್ದಿ ವಾಹಿನಿಯೊಂದು ಎಐ ಆಧಾರಿತ ನಿರೂಪಕಿಯನ್ನು ಪರಿಚಯಿಸಿದ್ದು, ಮಾಧ್ಯಮ ಲೋಕದಲ್ಲಿ ಹೊಸ ಸಂಚಲನ ಮೂಡಿದೆ.
ಕೈಮಗ್ಗ ಸೀರೆ ಧರಿಸಿರುವಂತೆ ರೂಪಿಸಲಾಗಿರುವ ಎಐ (ಕೃತಕ ಬುದ್ಧಿಮತ್ತೆ) ಆಧಾರಿತ ಕೃತಕ ಮಹಿಳೆ ಲೀಲಾಜಾಲವಾಗಿ ಸುದ್ದಿ ನಿರೂಪಣೆ ಮಾಡುತ್ತಿರುವ ವಿಡಿಯೋವನ್ನು ಮಾಧ್ಯಮ ಸಂಸ್ಥೆ ಹಂಚಿಕೊಂಡಿದೆ.
ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಸಂಸ್ಥೆ ವಾರ್ತಾ ವಾಚಕಿಗೆ ಲೀಸಾ ಎಂಬ ಹೆಸರು ಇರಿಸಿದ್ದು, ಈ ಕೃತಕ ಮಹಿಳೆ ಮನುಷ್ಯರಂತೆ ಸುದ್ದಿ ಓದುವುದು ಎಲ್ಲರನ್ನು ಒಂದು ಕ್ಷಣ ದಂಗು ಬಡಿಸುವಂತಿದೆ.
ಅಲ್ಲದೆ ವೈರಲ್ ವಿಡಿಯೋದಲ್ಲಿ ಸುದ್ದಿ ಸಂಸ್ಥೆ ನಡೆದು ಬಂದ ಹಾದಿಯ ಕಿರುಪರಿಚಯವನ್ನು ಉಚ್ಛಾರ ತಪ್ಪಿಲ್ಲದಂತೆ ಪ್ರಸ್ತುತ ಪಡಿಸುವುದು ತಂತ್ರಜ್ಞಾನ ಲೋಕದ ಸಾಧನೆಗೆ ಸಾಕ್ಷಿಯಾಗಿದೆ.