News Karnataka Kannada
Monday, April 22 2024
Cricket
ತುಮಕೂರು

ಜನಮನ ಗೆದ್ದ ತಿಪಟೂರು ಹಲಸಿನ ಹಬ್ಬ: ಹಲಸಿನ ಖಾದ್ಯಗಳಿಗೆ ಮನಸೋತ ಕೊಬ್ಬರಿ ಸೀಮೆಯವರು

Tiptur Jackfruit Festival: Copra seema to be impressed with jackfruit dishes
Photo Credit : News Kannada

ತುಮಕೂರು: ತೆಂಗಿನ ನಾಡಿನಲ್ಲಿ ಶ್ರೀ ಸತ್ಯ ಗಣಪತಿ ಆಸ್ಥಾನ ಮಂಟಪದಲ್ಲಿ ಸೊಗಡು ಜನಪದ ಹೆಜ್ಜೆ ವತಿಯಿಂದ ಆಯೋಜನೆ ಮಾಡಿದ್ದ ಹಲಸಿನ ಹಬ್ಬಕ್ಕೆ ಬಹಳ ಉತ್ತಮವಾದ ನಿರೀಕ್ಷೆಗೂ ಮೀರಿ ಜನಸಾಗರ ಬಂದಿದ್ದು ಕೊಬ್ಬರಿ ನಾಡಿನಲ್ಲಿ ಹಲಸಿನ ಅಂಟನ್ನು ಬಿಡಿಸಿದರು.

ಪುತ್ತೂರು, ಶಿರಸಿ, ಹಾವೇರಿ, ಉತ್ತರಕನ್ನಡ ಜಿಲ್ಲೆಗಳಿಂದ ಆಗಮಿಸಿದ ಹಲಸಿನ ಖಾದ್ಯಗಳಾದ  ಹಲಸಿನ ಹಣ್ಣಿನ ಪಾಯಸ ಹಲ್ವ, ಹೋಳಿಗೆ, ಹಲಸಿನಕಾಯಿಯ ಕಬಾಬ್, ಹಲಸಿನ ಹಣ್ಣಿನ ಪಲಾವ್, ಹಲಸಿನ ಹಣ್ಣಿನ ದೋಸೆ, ಹಲಸಿನಕಾಯಿಯ ವಡೆ, ನಿಪ್ಪಟ್ಟು, ಉತ್ತಪ್ಪ, ಜಾಮೂನು, ಕೇಕ್, ಬಿರಿಯಾನಿ, ಹಣ್ಣಿನ ಮಿಲ್ಕ್ ಶೇಕ್, ಚಿಪ್ಸ್, ಕಡುಬು, ಹಲಸಿನಕಾಯಿಯ ಪಲ್ಯ, ರಸಂ, ಸಾಂಬಾರು, ಹಲಸಿನ ಹಣ್ಣಿನ ಪಾನಕ, ಹಲಸಿನ ಐಸ್ ಕ್ರೀಮ್ ಮುಂತಾದ ಖಾದ್ಯಗಳನ್ನು ಪರಿಚಯಿಸಿದ ಮಹಿಳೆಯರು ಇದರ ಸ್ವಾದವನ್ನು ಕೊಬ್ಬರಿ ನಾಡಿನವರು ಸವಿದರು.

ತಿಪಟೂರಿನಲ್ಲಿ ವಿಶೇಷ ರೀತಿಯಲ್ಲಿ ವೇದಿಕೆಯನ್ನು ಅಲಂಕರಿಸಿದ ರೈತರು ಬಾಳೆದಿಂಡಿಗೆ ಜೋಡಿಸಿದ ದೀಪಗಳನ್ನು ಬೆಳಗಿ ಉದ್ಘಾಟಿಸಿದರು. ನಂತರ ಹಲಸಿನ ಹಣ್ಣನ್ನು ಬಿಡಿಸಿ ತಿನ್ನುವ ಮೂಲಕ ಕಾರ್ಯಕ್ರಮ ಉದ್ಘಾಟನೆಗೊಂಡಿತು.

ಕಾರ್ಯಕ್ರಮದಲ್ಲಿ ಸುಮಾರು ವಿವಿಧ ರೀತಿಯ ಶಂಕರ ಹಲಸು, ಸಿದ್ದು ಹಲಸು, ಶಂಭೋಶಂಕರ ಹಲಸು, ಮೋಹನ ಹಲಸು, ಚಂದ್ರ ಹಲಸು, ಚಿಕ್ಕಿ ಹಲಸು, ಸೇರಿದಂತೆ ಸುಮಾರು ೧೦ಕ್ಕೂ ಹೆಚ್ಚು ತರದ ಹಣ್ಣಿನ ತಳಿಗಳ ಸಸಿಗಳು ಹಾಗೂ ಹಣ್ಣುಗಳ ಪ್ರದರ್ಶನಕ್ಕೆ ಇಡಲಾಗಿತ್ತು.

ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಮಾಜಿ ಸಚಿವ ಬಿ.ಸಿ ನಾಗೇಶ್ ತೆಂಗಿನ ನಾಡಿನಲ್ಲಿ ಕೊಬ್ಬರಿ ಜೊತೆ ಇತರೆ ಬೆಳೆಗಳನ್ನು ಸಹ ಬೆಳೆಯುತ್ತಾರೆ, ಇಂತಹ ಹಬ್ಬಗಳನ್ನು ಮಾಡುವ ಮೂಲಕ ಒಂದು ವಸ್ತುವಿನ ಮೌಲ್ಯ ಹೆಚ್ಚಾಗುತ್ತದೆ. ಇದರಿಂದ ರೈತರ ಉತ್ಪನ್ನಗಳ ಮಾರಾಟದ ಅವಶ್ಯಕತೆ ಮತ್ತು ಅದರ ಪರಿಚಯ ಎಲ್ಲಾ ಜನರಿಗೂ ದೊರೆಯಬೇಕಾಗಿದ್ದು ಉತ್ತಮವಾದ ಅಂಶವಾಗಿದೆ. ರೈತರು ಬೆಳೆದ ಎಲ್ಲಾ ಬೆಳೆಗಳಿಗೂ ಉತ್ತಮವಾದ ಬೆಲೆ ದೊರೆತಾಗ ರೈತನ ಜೀವನವು ಉತ್ತಮ ರೀತಿಯಲ್ಲಿ ಇರುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬೆಂಗಳೂರಿನ ವಿಜ್ಞಾನಿಗಳಾದ ಡಾ.ವಾಸುದೇವ.ಕೆ.ಆರ್, ಶ್ರೀಕಾಂತ್ ಉಪನ್ಯಾಸವನ್ನು ನೀಡಿ, ಶಿರಸಿಯ ಮಮತಾಭಟ್ ಅವರಿಂದ ಹಲಸಿನ ಹಣ್ಣು ಮತ್ತು ಕಾಯಿಯ ಮೂಲಕ ವಿವಿಧ ರೀತಿಯ ಅಡಿಗೆ ಮಾಡುವ 15 ಖಾದ್ಯಗಳನ್ನು ಜನರಿಗೆ ಪರಿಚಯಿಸಲಾಯಿತು.

ಕಾರ್ಯಕ್ರಮದಲ್ಲಿ ಸೊಗಡು ಜನಪದ ಹೆಜ್ಜೆಯ ಸಿರಿಗಂಧ ಗುರು ಅಧ್ಯಕ್ಷತೆ ವಹಿಸಿದ್ದು,  ಗೋಪೇಗೌಡನಪಾಳ್ಯದ ಸ್ವಾವಲಂಬಿ ರೈತ ಗೋಪಯ್ಯ ದಂಪತಿಗಳನ್ನು ಗೌರವಿಸಲಾಯಿತು. ಅತಿಥಿಗಳಾಗಿ ನಿಸರ್ಗ ಪ್ರೇಮಿ ಗುಂಗುರುಮಳೆ ಮುರುಳಿಧರ್, ಆಯೋಜಕರಾದ ಚಿದಾನಂದ್, ರಘು ಗೋಪಾಲನಹಳ್ಳಿ, ಮೃತ್ಯುಂಜಯಪ್ಪಆರ್ಥಿಕ ಸಮಾಲೋಚಕಿ ರೇಖಾಮಂಜುನಾಥ್, ಕದಳಿ ಬಳಗದ ಪ್ರಭಾ ವಿಶ್ವನಾಥ್ ದೇವಾನಂದ್ ಬೆಳಗರಹಳ್ಳಿ, ಮನೋಹರ್ ರಂಗಾಪುರ, ತೋಟಗಾರಿಕೆ ಇಲಾಖೆಯ ಅಧಿಕಾರಿ ನವೀನ್ ಕುಮಾರ್, ಸುರೇಶ್, ವಕೀಲ ಸುಧಾಕರ್, ಮಹಿಳಾ ಮತ್ತು ಮಕ್ಕಳ ಇಲಾಖೆಯ ಮೇಲ್ವಿಚಾರಕಿ ಪ್ರೇಮ, ಬಸ್ತಿಹಳ್ಳಿ ರಾಜಣ್ಣ, ಆಯೋಜಕರಾಗಿದ್ದರು.

ತಿಪಟೂರು ಹಲಸಿನ ಹಬ್ಬದಲ್ಲಿ ಒಂದರಿಂದ ಐದನೇ ತರಗತಿ 6ನೇ ತರಗತಿಯಿಂದ 10ನೇ ತರಗತಿಗೆ ಪ್ರತ್ಯೇಕವಾಗಿ ಚಿತ್ರಕಲಾ ಸ್ಪರ್ಧೆ, ಮಕ್ಕಳಿಗಾಗಿ ಹಣ್ಣು ತಿನ್ನುವ ಸ್ಪರ್ಧೆ, ಮಹಿಳೆ ಮತ್ತು ಪುರುಷರಿಗಾಗಿ ಹಣ್ಣು ತಿನ್ನುವ ಸ್ಪರ್ಧೆ, ಹಲಸಿನ ಹಣ್ಣಿನ ತೂಕದ ಸ್ಪರ್ಧೆ, ಅಡುಗೆಯ ರುಚಿ ಸವಿಸುವ ಸ್ಪರ್ಧೆ, ಹಣ್ಣು ಕುಯ್ಯುವ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು