News Karnataka Kannada
Monday, May 06 2024
ದೇಶ

ಐತಿಹಾಸಿಕ ಮಾಯಿ ಪಟ್ಟಣದಲ್ಲಿ ಕಾಡ್ಗಿಚ್ಚು: 93 ಕ್ಕೇರಿದ ಸಾವಿನ ಸಂಖ್ಯೆ !

Maui wildfires
Photo Credit : Twitter

ನ್ಯೂಯಾರ್ಕ್:‌ ಹವಾಯಿ ಐತಿಹಾಸಿಕ ಮಾಯಿ ಪಟ್ಟಣದಲ್ಲಿ ಕಾಡ್ಗಿಚ್ಚಿನಿಂದ ಸತ್ತವರ ಸಂಖ್ಯೆ 93 ಕ್ಕೆ ಏರಿಕೆ ಆಗಿದೆ. ಇದು ಅಮೆರಿಕದ ಒಂದು ಶತಮಾನದ ಇತಿಹಾಸದಲ್ಲೇ ಸಂಭವಿಸಿದ ಭೀಕರ ಕಾಡ್ಗಿಚ್ಚು ಎಂದು ವಿಶ್ಲೇಷಿಸಲಾಗಿದೆ.

ಹೊಸದಾಗಿ ಬಿಡುಗಡೆಯಾದ ಅಂಕಿಅಂಶದ ಪ್ರಕಾರ, ಉತ್ತರ ಕ್ಯಾಲಿಫೋರ್ನಿಯಾದಲ್ಲಿ 2018 ರಲ್ಲಿ ಸಂಭವಿಸಿದ ಕ್ಯಾಂಪ್ ಫೈರ್‌ನ ಸಂಖ್ಯೆಯನ್ನೂ ಇದು ಮೀರಿಸಿದೆ. ಕ್ಯಾಂಪ್‌ ಫೈರ್‌ 85 ಜನರು ಬಲಿ ತೆಗೆದುಕೊಂಡಿತ್ತು.

ಶವಗಳ ಶೋಧಕ್ಕಾಗಿ ಶ್ವಾನ ತಂಡಗಳನ್ನು ಬಳಸಿಕೊಳ್ಳಲಾಗಿದೆ. ಮಾಯಿಯ ಕೆಲವು ಭಾಗಗಳನ್ನು ಧ್ವಂಸಗೊಳಿಸಿದ ಕಾಡ್ಗಿಚ್ಚು ಇನ್ನೂ ಉರಿಯುತ್ತಿದೆ. ಲಹೈನಾವನ್ನು ಪುನರ್ನಿರ್ಮಿಸಲು 5.5 ಬಿಲಿಯನ್ ಡಾಲರ್ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಲಹೈನಾಗೆ ಮರಳಲು ಸ್ಥಳೀಯ ನಿವಾಸಿಗಳಿಗೆ ಸೂಚನೆ ನೀಡಲಾಗಿದೆ ಎಂದು ವರದಿಯಾಗಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು