News Karnataka Kannada
Monday, April 29 2024
ದೆಹಲಿ

ಎಸಿ ಇಲ್ಲದೆ ಹಾರಾಟ ನಡೆಸಿದ ಇಂಡಿಗೋ: ಟಿಶ್ಯೂ ಕೊಟ್ಟ ವಿಡಿಯೋ ಪೋಸ್ಟ್ ಮಾಡಿದ ಶಾಸಕ

MLA posts video
Photo Credit : News Kannada

ದೆಹಲಿ: ಪಂಜಾಬ್​ನ ಕಾಂಗ್ರೆಸ್ ನಾಯಕ ಅಮರಿಂದರ್ ಸಿಂಗ್ ತಮಗೆ ಇಂಡಿಗೋ ವಿಮಾನದಲ್ಲಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಅವರು ಚಂಡೀಗಢದಿಂದ ಜೈಪುರಕ್ಕೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಿದ್ದಾರೆ, ವಿಮಾನದಲ್ಲಿ ಎಸಿ ಇರಲಿಲ್ಲ, ವಿಮಾನ ಸಿಬ್ಬಂದಿ ಬೆವರು ಒರೆಸಿಕೊಳ್ಳಲು ಪ್ರಯಾಣಿಕರಿಗೆ ಟಿಶ್ಯೂ ನೀಡಿದ್ದರು ಎಂದು ಟ್ವಿಟ್ಟರ್​ನಲ್ಲಿ ಬರೆದುಕೊಂಡಿದ್ದಾರೆ. ಈ 90 ನಿಮಿಷಗಳ ಪ್ರಯಾಣ ಅತ್ಯಂತ ಭಯಾನಕವಾಗಿತ್ತು ಎಂದು ಹೇಳಿಕೊಂಡಿದ್ದಾರೆ.

ಈ ಬಗ್ಗೆ ದೂರಿದ ಕಾಂಗ್ರೆಸ್ ಮುಖಂಡರು, ಮೊದಲು ಪ್ರಯಾಣಿಕರನ್ನು ಬಿಸಿಲಿನ ತಾಪದಲ್ಲಿ ಸುಮಾರು 10-15 ನಿಮಿಷಗಳ ಕಾಲ ಸರದಿಯಲ್ಲಿ ಕಾಯುವಂತೆ ಮಾಡಲಾಯಿತು ಮತ್ತು ನಂತರ ಎಸಿಗಳು ಆನ್ ಮಾಡದೆಯೇ ವಿಮಾನ ಟೇಕ್ ಆಫ್ ಆಯಿತು ಎಂದು ಹೇಳಿದರು. ಟೇಕ್‌ಆಫ್‌ನಿಂದ ಲ್ಯಾಂಡಿಂಗ್‌ವರೆಗೆ, AC ಗಳು ಆಫ್ ಆಗಿದ್ದವು ಮತ್ತು ಎಲ್ಲಾ ಪ್ರಯಾಣಿಕರು ಕಷ್ಟ ಪಡುವಂತಾಗಿತ್ತು.

ವೀಡಿಯೋದಲ್ಲಿ ಪ್ರಯಾಣಿಕರಿಗೆ ಟಿಶ್ಯೂ ಪೇಪರ್ ಕೊಡುತ್ತಿರುವುದನ್ನು ಕಾಣಬಹುದು. ಸಿಂಗ್ ಅವರು ನಾಗರಿಕ ವಿಮಾನಯಾನ ನಿರ್ದೇಶನಾಲಯ ಹಾಗೂ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವನ್ನು ಟ್ಯಾಗ್ ಮಾಡಿ, ವಿಮಾನಯಾನ ಸಂಸ್ಥೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು