ಮುಂಬೈ: ಮಸಾಲೆ ದೋಸೆ ದಕ್ಷಿಣ ಭಾರತದ ಪ್ರಸಿದ್ಧ ಆಹಾರ. ಆದರೆ ಒಂದು ಮಸಾಲೆ ದೋಸೆಗೆ ನೀವು ಈವರೆಗೂ ಹೆಚ್ಚೆಂದರೆ ಎಷ್ಟು ಹಣ ನೀಡಿರಬಹುದು? 100, 250.. ಗರಿಷ್ಠ ಎಂದರೆ 300 ರೂಪಾಯಿ ನೀಡಿರಬಹುದು. ಆದರೆ, ಇತ್ತೀಚೆಗೆ ಮುಂಬೈನ ಏರ್ಪೋರ್ಟ್ನಲ್ಲಿರುವ ರೆಸ್ಟೋರೆಂಟ್, ಒಂದು ಮಸಾಲೆದೋಸೆಗೆ ಫಿಕ್ಸ್ ಮಾಡಿರುವ ಬೆಲೆ ಕೇಳಿ ಗ್ರಾಹಕರು ಹೌಹಾರಿದ್ದಾರೆ.
ಈ ಕುರಿತಾದ ವಿಡಿಯೋವನ್ನು ಕೂಡ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದು, ಜಗತ್ತಿನ ಅತ್ಯಂತ ದುಬಾರಿ ದೋಸೆಯ ರೇಟ್ ಕೇಳಿ ಅಚ್ಚರಿ ಪಟ್ಟಿದ್ದಾರೆ. ಮುಂಬೈ ಏರ್ಪೋರ್ಟ್ನಲ್ಲಿರುವ ರೆಸ್ಟೋರೆಂಟ್ನ ರೇಟ್ ಚಾರ್ಟ್ನ ವಿಡಿಯೋವನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿಕೊಳ್ಳಲಾಗಿದೆ.
ಈ ವಿಡಿಯೋದಲ್ಲಿ ಚೆಫ್ ದೋಸೆಯನ್ನು ಸಿದ್ಧ ಮಾಡುತ್ತಿದ್ದು, ನಿಧಾನವಾಗಿ ವಿಡಿಯೋ ರೆಸ್ಟೋರೆಂಟ್ನ ಮೆನ್ಯು ಕಾರ್ಡ್ನತ್ತ ಹೊರಳುತ್ತದೆ. ಇದರಲ್ಲಿ ಬಟರ್ಮಿಲ್ಕ್ ವಿತ್ ಮಸಾಲೆದೋಸೆಯ ಬೆಲೆ 600 ರೂಪಾಯಿ ಆಗಿದ್ದರೆ, ಬೆಣ್ಣೆ ಖಾಲಿ ದೋಸೆಯ ಬೆಲೆ 620 ರೂಪಾಯಿ ಆಗಿದೆ. ಹಾಗೇನಾದರೂ ಈ ದೋಸೆಯೊಂದಿಗೆ ಲಸ್ಸಿ ಅಥವಾ ಫಿಲ್ಟರ್ ಕಾಫಿ ಕುಡಿಯುತ್ತೀರಿ ಎಂದಾದಲ್ಲಿ ಮೊತ್ತ ಇನ್ನಷ್ಟು ಏರಿಕೆಯಾಗುತ್ತದೆ.
ಈ ವಿಡಿಯೋವನ್ನು ಚೆಫ್ಡನ್ಇಂಡಿಯಾ ಇನ್ಸ್ಟಾಗ್ರಾಮ್ ಪೇಜ್ ಹಂಚಿಕೊಂಡಿದೆ. ವಿಡಿಯೋಗೆ ನೀಡಿರುವ ಕ್ಯಾಪ್ಶನ್ನಲ್ಲಿ ಮುಂಬೈ ಏರ್ಪೋರ್ಟ್ನಲ್ಲಿ ದೋಸೆಗಿಂತ ಚಿನ್ನವೇ ಕಡಿಮೆ ಬೆಲೆಗೆ ಸಿಗಬಹುದು. ಇಲ್ಲಿ ಒಂದು ದೋಸೆಗೆ 600 ರೂಪಾಯಿ ಎಂದು ಬರೆದುಕೊಂಡಿದೆ. ಈ ಪೋಸ್ಟ್ಗೆ ಇಲ್ಲಿಯವರೆಗೂ 9 ಲಕ್ಷ ವೀವ್ಸ್ಗಳು ಬಂದಿವೆ.