ಆಗ್ರಾ: ಉತ್ತರ ಪ್ರದೇಶದ ಆಗ್ರಾದಲ್ಲಿ ದಟ್ಟ ಮಂಜು ಕವಿದಿದ್ದರಿಂದ ಸರಣಿ ಅಪಘಾತ ಸಂಭವಿಸಿದೆ. ಹೀಗೆ ವಾಹನಗಳು ಒಂದಕ್ಕೊಂದು ಢಿಕ್ಕಿ ಹೊಡೆದಿದ್ದರಲ್ಲಿ ಟ್ರಕ್ ಕೂಡಾ ಇದ್ದು ಇದರಲ್ಲಿ ಕೋಳಿ ಸಾಗಿಸಲಾಗುತ್ತಿತ್ತು. ಈ ವಾಹನವೂ ಅಪಘಾದಲ್ಲಿ ಸಿಲುಕಿರುವುದನ್ನು ನೋಡಿದ ಜನರು ಟ್ರಕ್ ನಿಂದ ಕೋಳಿಗಳನ್ನು ಹೊರತೆಗೆದು ಮನೆಗಳಿಗೆ ಒಯ್ದಿದ್ದಾರೆ. ಅವರಲ್ಲಿ ಕೆಲವರು ಚೀಲಗಳೊಂದಿಗೆ ಬಂದು ಕೋಳಿ ತೆಗೆದುಕೊಂಡು ಹೋಗಿದ್ದಾರೆ. ಲಾರಿಯಲ್ಲಿ ಸುಮಾರು 500 ಕೋಳಿಗಳಿದ್ದು, ಸುಮಾರು ₹ 1.5 ಲಕ್ಷ ಬೆಲೆ ಬಾಳುತ್ತಿತ್ತು.
ಉತ್ತರ ಭಾರತದಲ್ಲಿ ಚಳಿ ಹೆಚ್ಚಾಗಿದ್ದು ಮಂಜು ಆವರಿಸಿದ್ದರಿಂದ ಜನರು ಪರದಾಡುವಂತಾಗಿದೆ. ದೆಹಲಿ, ಪಂಜಾಬ್ನಲ್ಲಿ ದಟ್ಟ ಮಂಜು ಆವರಿಸಿಕೊಂಡಿದ್ದು, 110 ದೇಶಿಯ ಹಾಗೂ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ವಿಳಂಬವಾಗಿದೆ.
ರೈಲು, ವಾಹನ ಸಂಚಾರಕ್ಕೂ ಮಂಜು ಅಡ್ಡಿಯಾಗಿದೆ. 8 ಗಂಟೆಗೆ 40ಕ್ಕೂ ಹೆಚ್ಚು ವಿಮಾನಗಳು ದಟ್ಟವಾದ ಮಂಜಿನಿಂದಾಗಿ ಹಾರಾಟ ವಿಳಂಬ ಕಂಡಿವೆ. ದೆಹಲಿಯಲ್ಲಿ ತೀವ್ರ ಮಂಜಿನಿಂದಾಗಿ ಗಾಳಿಯ ಗುಣಮಟ್ಟ ತೀವ್ರ ಕಳಪೆ ವಿಭಾದಲ್ಲೇ ಉಳಿದಿದೆ. ಗಾಳಿಯ ಗುಣಮಟ್ಟ ಮಾಪಕದ 500ರಷ್ಟಿದೆ.