News Karnataka Kannada
Saturday, April 27 2024
ಮಹಾರಾಷ್ಟ್ರ

ಮುಂಬೈ: ಎರಡನೇ ಬಾರಿ ಕೋವಿಡ್‌ ಪಾಸಿಟಿವ್‌ಗೆ ಒಳಗಾದ ಚಿತ್ರನಟ ಅಮಿತಾಬ್ ಬಚ್ಚನ್‌

Amitabh Bachchan tests positive for COVID-19 for the second time
Photo Credit : News Kannada

ಮುಂಬೈ: ಚಿತ್ರನಟ ಅಮಿತಾಬ್ ಬಚ್ಚನ್‌ ಅವರು ಎರಡನೇ ಬಾರಿಗೆ ಕೋವಿಡ್‌ ಪಾಸಿಟಿವ್‌ಗೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಶೀಘ್ರ ಗುಣಮುಖವಾಗಲಿ ಎಂದು ಅವರ ಅಭಿಮಾನಿಗಳು ಹಾರೈಸಿದ್ದಾರೆ.

ಜುಲೈ 2020 ರಲ್ಲಿ ಬಚ್ಚನ್‌ಗೆ ಮೊದಲ ಬಾರಿಗೆ ಕೊರೋನಾ ವೈರಸ್ ತಗುಲಿದಾಗ ಅವರನ್ನು ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅಮಿತಾಬ್‌ ಅವರು ಆಗಸ್ಟ್ 23 ರಂದು ಮಂಗಳವಾರ ತಡರಾತ್ರಿ ತಮ್ಮ ಟ್ವಿಟ್ಟರ್ ಖಾತೆಯಿಂದ ವಿಷಯವನ್ನು ಟ್ವೀಟ್ ಮಾಡುವ ಮೂಲಕ ತಮಗೆ ಕೋವಿಡ್‌ ಪಾಸಿಟಿವ್‌ ಆದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ನಾನು ಈಗಷ್ಟೇ ಕೋವಿಡ್ + ಪಾಸಿಟಿವ್ ಆಗಿದ್ದೇನೆ. ನನ್ನ ಸುತ್ತಮುತ್ತ ಇರುವವರೆಲ್ಲರೂ ದಯವಿಟ್ಟು ನಿಮ್ಮನ್ನು ಪರೀಕ್ಷಿಸಿಕೊಳ್ಳಿ ಎಂದು ಹೇಳಿದರು.

ಅವರು ಕೋವಿಡ್‌ ಪಾಸಿಟಿವ್‌ ಆದ ಸುದ್ದಿಯನ್ನು ಹಂಚಿಕೊಂಡ ತಕ್ಷಣ, ಅಭಿಮಾನಿಗಳು ನಟ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು