ಮುಂಬೈ : ಮುಂಬೈನ ನಾಲಾ ಸೋಪಾರಾ ಪ್ರದೇಶದಲ್ಲಿ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ವಿಚಾರದ ಕುರಿತು ಜಗಳ ನಡೆದಿದ್ದು, ಈ ವೇಳೆ ಮಹಿಳೆ ಮಗಳ ಜೊತೆ ಸೇರಿ ಪತಿಯನ್ನೇ ಕೊಲೆ ಮಾಡಿದ್ದಾರೆ ಕೊಲೆಯಾದ ವ್ಯಕ್ತಿಯನ್ನು ಸುರೇಶ್ ವಘೇಲಾ ಎಂದು ಗುರುತಿಸಲಾಗಿದೆ.
ಆರೋಪಿಗಳಾದ ವಘೇಲಾರ ಪತ್ನಿ ಹಾಗೂ ಮಗಳನ್ನು ಜಾಸು, ಮೋನಿಕಾ ಎಂದು ಗುರುತಿಸಲಾಗಿದೆ. ಮಗಳು ಮೋನಿಕಾ ವಿಧವೆಯಾಗಿದ್ದು, ವಘೇಲಾ ಅವರು ಜಾಸು, ಮೋನಿಕಾ ಹಾಗೂ ಮಗನೊಂದಿಗೆ ನಲ ಸೋಪಾರದ ಹನುಮಾನ್ ನಗರದಲ್ಲಿ ವಾಸಿಸುತ್ತಿದ್ದರು.
ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೋರೇಷನ್(ಬಿಎಂಸಿ)ಯಲ್ಲಿ ಕೆಲಸ ಮಾಡುತ್ತಿದ್ದ ವಘೇಲಾ ಅವರಿಗೆ ಕೆಲಸದ ಒತ್ತಡ ಹೆಚ್ಚಿತ್ತು. ಜುಲೈ ತಿಂಗಳಲ್ಲಿ ವಘೇಲಾ ಅವರಿಗೆ 4 ಲಕ್ಷ ರೂ.ಗಳ ಚೆಕ್ ಬಂದಿರುವುದು ತನಿಖೆಯಿಂದ ತಿಳಿದು ಬಂದಿದೆ.