ಬೆಂಗಳೂರು : ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಶೀಘ್ರವೇ ಪಾದಯಾತ್ರೆ ಮುಂದುವರಿಕೆ ಸಂಬಂಧ ದಿನಾಂಕ ಪ್ರಕಟಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಪಾದಯಾತ್ರೆ ಮುಂದುವರೆಸಿ ಬಜೆಟ್ ಅಧಿವೇಶನ ಆರಂಭವಕ್ಕೂ ಮುನ್ನ ಪೂರ್ಣಗೊಳಿಸಬೇಕು ಎಂದು ಎಲ್ಲರೂ ಅಭಿಪ್ರಾಯ ಪಟ್ಟಿದ್ದಾರೆ.
ಹೀಗಾಗಿ ಫೆ. 20 ರಂದು ನಿರ್ಣಯ ಕೈಗೊಂಡ ನಂತರ ಮೇಕೆದಾಟು ಪಾದಯಾತ್ರೆ ಯಾವಾಗ ಆರಂಭವಾಗಲಿದೆ ಎಂಬುದನ್ನು ತಿಳಿಸಸುತ್ತೇವೆ ಎಂದು ಹೇಳಿದ್ದಾರೆ.