ಪುಣೆ: ಪುಣೆಯ “ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ’ಕ್ಕೆ ದೇಶದಲ್ಲಿ ಬೂಸ್ಟರ್ ಡೋಸ್ ಲಸಿಕೆ ನೀಡು ವುದರಿಂದ ಉಂಟಾಗುವ ಪರಿಣಾಮಗಳ ಅಧ್ಯಯನಕ್ಕೆ ಸೂಚಿಸಲಾಗಿದೆ.ದೇಶದಲ್ಲಿ ಒಮಿಕ್ರಾನ್ ರೂಪಾಂತರಿ ಪ್ರಕರಣಗಳ ಸಂಖ್ಯೆ 38ಕ್ಕೆ ಏರಿಕೆಯಾಗಿರುವಂತೆಯೇ ಮತ್ತು ಬೂಸ್ಟರ್ ಡೋಸ್ ಲಸಿಕೆ ನೀಡಬೇಕು ಎಂಬ ಬಗ್ಗೆ ಬೇಡಿಕೆ ಹೆಚ್ಚಿರು ವಂತೆಯೇ ಈ ಬೆಳವಣಿಗೆ ನಡೆದಿದೆ.
ವರದಿಯನ್ನು ಕೇಂದ್ರ ಸರಕಾರದ ಉನ್ನತಮಟ್ಟದ ವಿಷಯ ತಜ್ಞರ ಸಮಿತಿ (ಎಸ್ಇಸಿ)ಗೆ ಸಲ್ಲಿಸುವಂತೆ ಸಲಹೆ ಮಾಡಲಾಗಿದೆ.
ಡಿ.10ರಂದು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ಮತ್ತು ಎಸ್ಇಸಿ ನಡುವಿನ ಸಭೆಯಲ್ಲಿ ಸೀರಂ ಇನ್ಸ್ಟಿ ಟ್ಯೂಟ್ಗೆ ಬೂಸ್ಟರ್ ಡೋಸ್ ಲಸಿಕೆ ನೀಡುವ ಬಗ್ಗೆ ಅನುಮತಿ ನಿರಾಕರಿಸಲಾಗಿತ್ತು. ಜತೆಗೆ ಹೈದರಾಬಾದ್ನ ಬಯಲಾಜಿಕಲ್ ಇ ಸಂಸ್ಥೆಯು ಮೂರನೇ ಹಂತದ ಲಸಿಕೆ ಪ್ರಯೋಗದ ಬಗೆಗಿನ ಅಧ್ಯಯನಕ್ಕೆ ಉತ್ಸಾಹ ತೋರಿದೆ.