ಪುಣೆಯ ಬಿಬ್ವೆವಾಡಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಈ ಸಂಬಂಧ 22 ವರ್ಷದ ರಿಷಿಕೇಶ್ ಭಾಗ್ವತ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ ಸಂತ್ರಸ್ಥ ಬಾಲಕಿ ಫಿಟ್ನೆಸ್ ತರಗತಿಗೆ ಹೋಗುತ್ತಿದ್ದಾಗ ತನ್ನ ಸ್ನೇಹಿತರೊಂದಿಗೆ ಬಂದ ರಿಷಿಕೇಶ್ ಭಾಗ್ವತ್ ಆಕೆಯನ್ನು ರಸ್ತೆ ಮಧ್ಯೆ ತಡೆದು ಮಾತನಾಡಿದ್ದಾನೆ. ಈ ವೇಳೆ ಆಕೆಯೊಂದಿಗೆ ಇದ್ದ ಸ್ನೇಹಿತೆಯರನ್ನು ಬೆದರಿಸಿ ಓಡಿಸಿದ್ದಾನೆ. ಬಳಿಕ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಈ ವೇಳೆ ಆಕೆಯ ಮೇಲೆ ರಿಷಿಕೇಶ್ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಪರಿಣಾಮ ಬಾಲಕಿ ರಸ್ತೆಯಲ್ಲೇ ಸಾವನ್ನಪ್ಪಿದ್ದಾಳೆ ಎಂದು ಹೇಳಲಾಗಿದೆ.