News Karnataka Kannada
Thursday, May 09 2024
ಮಹಾರಾಷ್ಟ್ರ

ಗಾಯನ ಕೋಗಿಲೆ ಜತೆ  ಮಾಜಿ ಪ್ರಧಾನಿ ವಾಜಪೇಯಿ ಹೋಲಿಸಿದ ನೆಟ್ಟಿಗರು

Latha Mangeshwar
Photo Credit :

ಮುಂಬೈ  ; ಇಂದು ನಿಧನರಾದ  ಗಾನಕೋಗಿಲೆ  ಲತಾ ಅವರ ಸಾವಿಗೆ ಕಂಬಿನಿ ಮಿಡಿದು ಲಕ್ಷಾಂತರ ಅಭಿಮಾನಿಗಳು  ವಾಟ್ಸ್‌ ಅಪ್‌ , ಇನ್ಸ್ಟಾಗ್ರಾಂ ಮತ್ತು ಫೇಸ್‌ ಬುಕ್‌ ನಲ್ಲಿ  ಶೋಕ ಸಂದೇಶ ಗಳನ್ನು ಹಂಚಿಕೊಳ್ಳುತಿದ್ದಾರೆ. ಅಭಿಮಾನಿಗಳು ಲತಾ ಜತೆ
ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿಯವರನ್ನು ಕೂಡ ನೆನಪಿಸಿಕೊಳ್ಳುತ್ತಿದ್ದಾರೆ.

ಈ ಇಬ್ಬರಿಗೂ ಕೆಲ ವಿಷಯಗಳಲ್ಲಿ ಸಾಮ್ಯತೆ ಇರುವುದೇ ಅಭಿಮಾನಿಗಳ ಈ ನಡೆಗೆ ಕಾರಣವಾಗಿದೆ. ಇಬ್ಬರ ಹೆಸರಲ್ಲೂ ಒಂದು ರೀತಿಯಲ್ಲಿ ಸಂಬಂಧವಿದೆ. ಅದೇನೆಂದರೆ LATA ಎಂಬುದನ್ನು ತಿರುಗಿಸಿ ಬರೆದರೆ ATAL ಎಂದಾಗುತ್ತದೆ ಎಂಬುದಾಗಿ   ಕೆಲವರು ಬರೆದುಕೊಂಡಿದ್ದು ಒಮ್ಮೆ ಅಟಲ್​ ಬಿಹಾರಿ ವಾಜಪೇಯಿ ಅವರೇ ಈ ವಿಷಯ ಪ್ರಸ್ತಾಪಿಸಿದ್ದರು ಎಂಬುದನ್ನು ಹೇಳಿಕೊಂಡಿದ್ದಾರೆ.

“ಅಟಲ್ ಅವರು ಎಂಥ ವಾಗ್ಮಿ ಎಂದರೆ, ಅವರು ಒಮ್ಮೆ ಲತಾ ಮಂಗೇಶ್ಕರ್ ಅವರ ಜತೆ ಮಾತನಾಡುತ್ತಿದ್ದಾಗ ಹೀಗೆ ಹೇಳಿದ್ದರು. ‘ನೀವು ತಿರುಗಿದರೆ ನಾನು..’ ಎಂದಾಗ ಅಟಲರನ್ನು ಲತಾ ಮಂಗೇಶ್ಕರ್ ಅಚ್ಚರಿಯಿಂದ ನೋಡಿದ್ದರು. ಆಗ LATA ಉಲ್ಟಾ ಆಗಿಸಿದರೆ ATAL ಆಗುತ್ತದೆ ನೋಡಿ” ಎಂದು ಅಟಲ್ ಹೇಳಿದ್ದರು ಎಂಬುದನ್ನು ಕೆಲವರು ಸ್ಮರಿಸಿಕೊಂಡಿದ್ದಾರೆ.

ಕವಿಯೂ ಆಗಿದ್ದ ಅಟಲ್‌ ಅವರ  ‘ಥನ್ ಗಯಿ, ಮೌಥ್ ಸೆ ಥನ್​ ಗಯಿ’ ಎಂಬ   ಕವಿತೆಯನ್ನು ಲತಾ ಹಾಡಿದ್ದರು.  ಮತ್ತೊಂದು ಸಾಮ್ಯತೆ ಎಂದರೆ ಈ ಇಬ್ಬರೂ ಅವಿವಾಹಿತರಾಗಿದ್ದು ಇಬ್ಬರೂ ಭಾರತ ರತ್ನ ಪುರಸ್ಕೃತರು. ಇನ್ನು ಅಟಲ್ ಅವರು ಪ್ರಧಾನಿ ಆಗಿದ್ದಾಗಲೇ ಲತಾ ಭಾರತ ರತ್ನ ಪುರಸ್ಕೃತರಾಗಿದ್ದರು.

ಇಬ್ಬರೂ  ತಮ್ಮ  ಕ್ಷೇತ್ರಗಳಲ್ಲಿ  ಪ್ರಸಿದ್ದರಾಗಿದ್ದವರಷ್ಟೇ ಅಲ್ಲ ಜನರನ್ನಾಕರ್ಷಿಸಬಲ್ಲ  ಪ್ರತಿಭೆ ಹೊಂದಿದ್ದರು.   ಇಬ್ಬರೂ ಕೂಡ  ಆಸ್ಪತ್ರೆಯಲ್ಲೇ ಸಾವಿಗೀಡಾದರು.   ಅಟಲ್ ತಮ್ಮ  ತಂದೆ ಇದ್ದಂತೆ ಎಂದು ಹೇಳುತ್ತಿದ್ದ ಲತಾ 92 ವರ್ಷಕ್ಕೆ ನಿಧನರಾದರೆ, ಅಟಲ್​ ಅವರು ತಮ್ಮ 93ನೇ ವಯಸ್ಸಿನಲ್ಲಿ ನಿಧನರಾದರು. ಸ್ವಾತಂತ್ರ್ಯ ಹೋರಾಟಗಾರ ವೀರ್‌ ಸಾವರ್ಕರ್‌ ಅವರನ್ನು ಇಬ್ಬರೂ ತಂದೆಯ ಸಮಾನ ಎಂದು ಭಾವಿಸಿಕೊಂಡಿದ್ದರು ಎಂಬ ಸಂಗತಿಗಳನ್ನು ನೆಟ್ಟಿಗರು ಹಂಚಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 1 / 5. Vote count: 1

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು