News Karnataka Kannada
Tuesday, May 07 2024
ಮಹಾರಾಷ್ಟ್ರ

ಗಾಂಧಿಧಾಮ್ ಪುರಿ ಎಕ್ಸ್ ಪ್ರೆಸ್ ರೈಲಿನಲ್ಲಿ ಬೆಂಕಿ

Gandidam Express
Photo Credit : Twitter

ನಂದೂರ್ಬಾರ್: ಮಹಾರಾಷ್ಟ್ರದ ನಂದೂರ್ಬಾರ್ ರೈಲು ನಿಲ್ದಾಣದ ಬಳಿ ಶನಿವಾರ ಗಾಂಧಿಧಾಮ್- ಪುರಿ ಎಕ್ಸ್ ಪ್ರೆಸ್ ರೈಲಿನ ಪ್ಯಾಂಟ್ರಿ ಬೋಗಿಯೊಳಗೆ ಹಠಾತ್ ಬೆಂಕಿ ಕಾಣಸಿಕೊಂಡಿದೆ. ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ. ಅವರಿಗೆ ಯಾವುದೇ ಅಪಾಯವಾಗದಂತೆ ಸ್ಥಳಾಂತರಿಸಲಾಯಿತು. ಬೆಂಕಿಯಿಂದ ಆದ ನಷ್ಟದ ಬಗ್ಗೆ ಇನ್ನೂ ಯಾವುದೇ ವರದಿ ಬಂದಿಲ್ಲ.

ಗಾಂಧಿ ಧಾಮ್- ಪುರಿ ಎಕ್ಸ್ ಪ್ರೆಸ್ ರೈಲು ಇಂದು ಬೆಳಗ್ಗೆ ಸುಮಾರು 10-35ಕ್ಕೆ ನಂದೂರ್ಬಾರ್ ನಿಲ್ದಾಣ ಪ್ರವೇಶಿಸುತ್ತಿದ್ದಂತೆ ರೈಲಿನ ಪ್ಯಾಂಟ್ರಿ ಬೋಗಿಯಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡಿದೆ.

ಈ ಸುದ್ದಿ ತಿಳಿಯುತ್ತಿದ್ದಂತೆ ನಿಲ್ದಾಣದಲ್ಲಿದ್ದ ಬೆಂಕಿ ನಿರೋಧಕ ತಂಡ ಸ್ಥಳಕ್ಕೆ ಧಾವಿಸಿದ್ದು, ಬೆಂಕಿಯ ಜ್ವಾಲೆಯನ್ನು ನಂದಿಸಿರುವುದಾಗಿ ರೈಲ್ವೆ ಸಚಿವಾಲಯ ತಿಳಿಸಿದೆ. ಪ್ಯಾಂಟ್ರಿ ಕಾರ್ ರೈಲಿನಿಂದ ಪ್ರತ್ಯೇಕವಾಗಿರುತ್ತದೆ.

ವೈದ್ಯಕೀಯ ತಂಡ ಹಾಗೂ ಅರೆ ವೈದ್ಯಕೀಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಪ್ರಯಾಣಿಕರಿಗೆ ಉಪಚರಿಸಿದ್ದು, ಯಾರಿಗೂ ಗಾಯವಾಗಿಲ್ಲ. ಈ ರೈಲು ಒಟ್ಟು 22 ಬೋಗಿಗಳನ್ನು ಒಳಗೊಂಡಿತ್ತು. ಪ್ಯಾಂಟ್ರಿ ಕಾರು 13ನೇ ಬೋಗಿ ಆಗಿತ್ತು ಎಂದು ಪಶ್ಚಿಮ ರೈಲ್ವೆ ಮಾಹಿತಿ ನೀಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು