News Karnataka Kannada
Monday, April 29 2024
ಮಹಾರಾಷ್ಟ್ರ

ಇನ್‌ಸ್ಟಾಗ್ರಾಂ ಸ್ಟೇಟಸ್‌ ವಿಚಾರಕ್ಕೆ ಗಲಾಟೆ: ಮೂರು ಬಾಲಕರು ಪೊಲೀಸ್‌ ವಶಕ್ಕೆ

Photo Credit :

ಪುಣೆ: ಇನ್‌ಸ್ಟಾಗ್ರಾಂನ ಸ್ಟೇಟಸ್‌ ವಿಚಾರವಾಗಿ ಹದಿಹರೆಯದವರ ನಡುವೆ ಗಲಾಟೆ ಸಂಭವಿಸಿದೆ. ಇದು ವಿಕೋಪಕ್ಕೆ ತಿರುಗಿ ಚೂಪಾದ ಆಯುಧಗಳಿಂದ ಹದಿನಾರು ವರ್ಷದ ಬಾಲಕನ ಮೇಲೆ ಹಲ್ಲೆ ಆಗಿದೆ. ಈ ಪ್ರಕರಣ ಸಂಬಂಧ ಪೊಲೀಸರು ಮೂರು ಬಾಲಕರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪುಣೆ ಸಿಟಿ ಪೊಲೀಸರು ತಿಳಿಸಿದ್ದಾರೆ.

ವಡ್ಗಾಂವ್‌ ಬುದ್ರುಕ್‌ನಲ್ಲಿ ಭಾನುವಾರ ಸಂಜೆ ಈ ಹಲ್ಲೆ ನಡೆದಿದೆ. ಹಲ್ಲೆಗೊಳಗಾದ ಬಾಲಕ ಹಾಕಿದ ಇನ್‌ಸ್ಟಾಗ್ರಾಂ ಸ್ಟೇಟಸ್‌ ಹಲ್ಲೆ ಮಾಡಿದ ಮೂವರು ಬಾಲಕರಲ್ಲಿ ತೀವ್ರ ಅಸಮಾಧಾನ ಉಂಟುಮಾಡಿತ್ತು. ಹೀಗಾಗಿ, ಅವರು ಕ್ರುದ್ಧರಾಗಿದ್ದರು.

ಹಲ್ಲೆಗೊಳಗಾದ ಬಾಲಕ ಭಾನುವಾರ ಸಂಜೆ 4 ಗಂಟೆಗೆ ಎಟಿಎಂನಿಂದ ಹಣ ವಿತ್‌ಡ್ರಾ ಮಾಡಲು ತೆರಳಿದ್ದ. ಇದೇ ವೇಳೆ ಅಸಮಾಧಾನಗೊಂಡಿದ್ದ ಬಾಲಕರ ಗುಂಪು ಹರಿತ ಆಯುಧಗಳೊಂದಿಗೆ ಈ ಬಾಲಕನ ಮೇಲೆ ಹಲ್ಲೆ ಮಾಡಿದೆ.

ಬಾಲಕನ ಮೇಲೆ ಹಲ್ಲೆ ನಡೆಸುತ್ತಿದ್ದ ಗುಂಪು, ಆತನ ರಕ್ಷಣೆಗೆ ಸಾರ್ವಜನಿಕರು ಧಾವಿಸದಂತೆ ತಡೆಯಲು ಗಾಳಿಯಲ್ಲಿ ಆ ಆಯುಧಗಳನ್ನು ಬೀಸುತ್ತಿತ್ತು. ಅಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಸಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ಈ ಬಗ್ಗೆ ದೂರು ದಾಖಲಿಸಿಕೊಂಡು, ಕೂಡಲೇ ಹಲ್ಲೆಕೋರ ಬಾಲಕರನ್ನು ಬಂಧಿಸಲು ಪೊಲೀಸರು ಶೋಧ ನಡೆಸಿದರು. ಮೂವರು ಬಾಲಕರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು