News Karnataka Kannada
Monday, April 29 2024
ಮಹಾರಾಷ್ಟ್ರ

ಅಭಿವೃದ್ಧಿ ಕೆಲಸಗಳಿಗೆ ರಾಜಕೀಯದ ಹಂಗಿಲ್ಲ; ಕೇಂದ್ರ ಸಚಿವ ನಿತಿನ್‌ ಗಡ್ಕರಿ

Mangaluru: Centre likely to abandon Shiradi Ghat subway highway project
Photo Credit :

ಪುಣೆ : ಮಹಾರಾಷ್ಟ್ರವೇ ಇರಲಿ ಅಥವಾ ರಾಷ್ಟ್ರದ ಯಾವುದೇ ಭಾಗವಿರಲಿ, ರಾಜಕೀಯದ ಹಂಗಿಲ್ಲದೆ ಅಭಿವೃದ್ಧಿ ಕೆಲಸಗಳು ಸಾಗುತ್ತವೆ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹೇಳಿದರು.

ಶನಿವಾರ ಸಾಂಗ್ಲಿಯಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಗಡ್ಕರಿ, ತಾವು ಮಹಾರಾಷ್ಟ್ರದ ರಾಯಭಾರಿ ಎಂದೇ ಭಾವಿಸಿರುವುದಾಗಿಯೂ, ಮಹಾರಾಷ್ಟ್ರವು ರಾಷ್ಟ್ರದಲ್ಲಿ ಮೊದಲ ಸ್ಥಾನಕ್ಕೆ ಏರುತ್ತದೆ ಎಂಬ ನಂಬಿಕೆ ಇರುವುದಾಗಿಯೂ ತಿಳಿಸಿದರು.

”ಕಳೆದ 7 ವರ್ಷಗಳಲ್ಲಿ, ಮಹಾರಾಷ್ಟ್ರದಲ್ಲಿ 5 ಲಕ್ಷ ಕೋಟಿ ಮೌಲ್ಯದ ಅಭಿವೃದ್ಧಿ ಕೆಲಸಗಳನ್ನು ಅನುಷ್ಠಾನಗೊಳಿಸುವ ಅವಕಾಶ ಸಿಕ್ಕಿದೆ. ಬಂದರು, ಮೀನುಗಾರಿಕೆ, ಜಲ ಸಂಪನ್ಮೂಲ, ಎಂಎಸ್‌ಎಂಇ ಮತ್ತು ರಸ್ತೆ ಸಾರಿಗೆ ಖಾತೆಗಳನ್ನು ನಿರ್ವಹಿಸಿದ್ದೇನೆ. ಆದರೆ ನಾನೊಬ್ಬ ಮಹಾರಾಷ್ಟ್ರದ ರಾಯಭಾರಿ ಎಂದೇ ಭಾವಿಸಿದ್ದೇನೆ. ನಾನು ಸದಾ ಛತ್ರಪತಿ ಶಿವಾಜಿ ಮಹಾರಾಜರ ಭೂಮಿಯ ಏಳ್ಗೆಯನ್ನು ಬಯಸುತ್ತೇನೆ” ಎಂದು ಗಡ್ಕರಿ ಹೇಳಿದರು.

”ಯಾವುದಾದರು ಒಂದು ರಾಜ್ಯ ‘ನಂಬರ್‌ 1’ ಆಗಿ ಹೊರ ಹೊಮ್ಮಿದರೆ ಅದು ಮಹಾರಾಷ್ಟ್ರವಾಗಿರಬೇಕು. ಮಹಾರಾಷ್ಟ್ರವಿರಲಿ ಅಥವಾ ರಾಷ್ಟ್ರದ ಯಾವುದೇ ಭಾಗವಿರಲಿ ಅಭಿವೃದ್ಧಿ ಕೆಲಸಗಳಿಗೆ ರಾಜಕೀಯದ ಹಂಗಿಲ್ಲ” ಎಂದು ಗಡ್ಕರಿ ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು