ಮುಂಬೈ (ಮಹಾರಾಷ್ಟ್ರ): ಮುಂಬೈನ ಥಾಣೆ ನಿವಾಸಿಯೊಬ್ಬರು ಸೋಮವಾರ ಪಬ್ ಜಿ ಗೇಮ್ ಆಡುತ್ತಿದ್ದಾಗ ದ್ವೇಷದ ಹಿನ್ನೆಲೆಯಲ್ಲಿ ಮೂವರು ಸ್ನೇಹಿತರು ಚಾಕುವಿನಿಂದ ಇರಿದು ಕೊಂದಿದ್ದಾರೆ. ಈ ಸಂಬಂಧ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಇಲ್ಲಿ ನಾಲ್ವರು ಸ್ನೇಹಿತರು ಆಗಾಗ ಪಬ್ಜಿ ಗೇಮ್ಗಳನ್ನು ಆಡುತ್ತಿದ್ದರು. ಸೋಮವಾರ ರಾತ್ರಿ ಯಾವುದೋ ವಿಷಯಕ್ಕೆ ತಮ್ಮ ತಮ್ಮೊಳಗೆ ಜಗಳವಾಡಿಕೊಂಡಿದ್ದಾರೆ. ಈ ವೇಳೆ ಕುಡಿ ಅಮಲಿನಲ್ಲಿದ್ದ ಮೂವರು ಸೇರಿ ಸ್ನೇಹಿತನಿಗೆ ಚಾಕುವಿನಿಂದ ಇರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಸದಾಶಿವ ನಿಕಂ ತಿಳಿಸಿದ್ದಾರೆ.
ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಇನ್ನು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.