News Karnataka Kannada
Tuesday, May 07 2024
ಮಹಾರಾಷ್ಟ್ರ

ಮಹಾರಾಷ್ಟ್ರ: ಸಂಬಂಧಿ ಮದುವೆಗೆ ಬರಲೊಪ್ಪದ ಪತಿ ಮೇಲೆ ಪತ್ನಿಯಿಂದ ಹಲ್ಲೆ

Murder
Photo Credit :

ಮಹಾರಾಷ್ಟ್ರ: ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಮಹಿಳೆಯೊಬ್ಬರು ತನ್ನೊಂದಿಗೆ ಸಂಬಂಧಿಕರ ಮದುವೆಗೆ ತನ್ನೊಂದಿಗೆ ಬರಲು ಒಪ್ಪಲಿಲ್ಲ ಎಂಬ ಕಾರಣಕ್ಕೆ ಪತ್ನಿಯು ಪತಿಯ ಮೇಲೆ ಹಲ್ಲೆ ನಡೆಸಿದ ಘಟನೆಯು ನಡೆದಿದೆ. ಪತಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಪತ್ನಿಯ ವಿರುದ್ಧ ಮುಕುಂದವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದು ಮಾತ್ರವಲ್ಲದೇ ಪಾತ್ರೆಗಳನ್ನು ಆತನ ಮೇಲೆ ಎಸೆದಿದ್ದಾಳೆ ಎಂದು ತಿಳಿದುಬಂದಿದೆ. ಈ ಸಂಬಂಧ ಪತಿಯು ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾನೆ. ಸಂಬಂಧಿಗಳ ಮದುವೆಗೆ ಹಾಜರಾಗುವ ವಿಚಾರವಾಗಿ ದಂಪತಿಯ ನಡುವೆ ಆರಂಭವಾದ ಕಲಹವು ತಾರಕಕ್ಕೇರಿತ್ತು.

ಇಬ್ಬರು ಚಹಾ ಕುಡಿಯುತ್ತಿದ್ದ ವೇಳೆಯಲ್ಲಿ ಪತಿಯು ತನಗೆ ಮದುವೆಗೆ ಬರಲು ಆಗೋದಿಲ್ಲ ಎಂದು ಹೇಳಿದ್ದಾನೆ. ಇಷ್ಟಕ್ಕೆ ಮುನಿಸಿಕೊಂಡ ಪತ್ನಿಯು ಪತಿಯ ಜೊತೆ ವಾಗ್ವಾದವನ್ನೇ ನಡೆಸಿದ್ದಾಳೆ. ಆದರೆ ಯಾವುದಕ್ಕೂ ಪತಿಯು ಒಪ್ಪದ ಹಿನ್ನೆಲೆಯಲ್ಲಿ ಚಹಾದ ಲೋಟವನ್ನು ಪತಿಯ ಮೇಲೆ ಎಸೆದಿದ್ದಾಳೆ. ಇದು ಪತಿಯ ಹಣೆಗೆ ಹೋಗಿ ಬಡಿದಿದೆ. ಬಳಿಕ ಅಡುಗೆ ಮನೆಯಿಂದ ಚಾಕು ತಂದ ಪತ್ನಿ ಆತನ ಮೇಲೆ ಹಲ್ಲೆ ನಡೆಸಿದ್ದಾಳೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು