News Karnataka Kannada
Sunday, May 05 2024
ಮಧ್ಯ ಪ್ರದೇಶ

ಸಹಪಾಠಿಗೆ ಕೈವಾರದಿಂದ 108 ಬಾರಿ ಚುಚ್ಚಿದ ವಿದ್ಯಾರ್ಥಿಗಳು

4ನೇ ತರಗತಿಯ ವಿದ್ಯಾರ್ಥಿಗೆ ಆತನ ಮೂವರು ಸಹಪಾಠಿಗಳು ಕೈವಾರದಿಂದ 108 ಬಾರಿ ಚುಚ್ಚಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಇಂದೋರ್‌ನ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ
Photo Credit : News Kannada

ಮಧ್ಯಪ್ರದೇಶ: 4ನೇ ತರಗತಿಯ ವಿದ್ಯಾರ್ಥಿಗೆ ಆತನ ಮೂವರು ಸಹಪಾಠಿಗಳು ಕೈವಾರದಿಂದ 108 ಬಾರಿ ಚುಚ್ಚಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಇಂದೋರ್‌ನ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ.

ಜಗಳದ ವೇಳೆ 4ನೇ ತರಗತಿಯ ವಿದ್ಯಾರ್ಥಿಯೊಬ್ಬನ ಮೇಲೆ ಆತನ ಮೂವರು ಸಹಪಾಠಿಗಳು ಜಾಮೆಟ್ರಿ ಕಂಪಾಸ್​ನಿಂದ 108 ಬಾರಿ ಹಲ್ಲೆ ನಡೆಸಿದ್ದಾರೆ ಎಂದು ಅಧಿಕಾರಿಯೊಬ್ಬರು ಇಂದು ತಿಳಿಸಿದ್ದಾರೆ.

ಘಟನೆಯ ಕುರಿತಂತೆ ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯೂಸಿ) ಪೊಲೀಸರಿಂದ ತನಿಖಾ ವರದಿ ಕೇಳಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ನ.24 ರಂದು ಏರೋಡ್ರೋಮ್ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಶಾಲೆಯಲ್ಲಿ ನಡೆದ ಜಗಳದ ವೇಳೆ ಈ ಘಟನೆ ನಡೆದಿದೆ ಎಂದು ಸಿಡಬ್ಲ್ಯೂಸಿ ಅಧ್ಯಕ್ಷೆ ಪಲ್ಲವಿ ಪೋರ್ವಾಲ್ ಹೇಳಿದ್ದಾರೆ.

‘ಪ್ರಕರಣ ಆಘಾತಕಾರಿಯಾಗಿದೆ. ಇಷ್ಟು ಚಿಕ್ಕ ವಯಸ್ಸಿನ ಮಕ್ಕಳ ಹಿಂಸಾತ್ಮಕ ವರ್ತನೆಗೆ ಕಾರಣವನ್ನು ಕಂಡುಹಿಡಿಯಲು ನಾವು ಪೊಲೀಸರಿಂದ ತನಿಖಾ ವರದಿ ಕೇಳಿದ್ದೇವೆ, ‘ಎಂದು ಅವರು ತಿಳಿಸಿದ್ದಾರೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು