ಇಂದೋರ್: ಪತಿ ತನ್ನ ಗರ್ಭಿಣಿ ಪತ್ನಿಯನ್ನೇ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ ಘಟನೆ ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದಿದೆ.
ಶಾರದಾ (35) ಮೃತ ಮಹಿಳೆ, ಆರೋಪಿ ಪತಿಯನ್ನು ಉಮೇಶ್ ರಾಥೋಡ್ ಎಂದು ಗುರುತಿಸಲಾಗಿದೆ. ಮಾಹಿತಿ ಪ್ರಕಾರ, ಮೃತರು 5 ತಿಂಗಳ ಗರ್ಭಿಣಿ. ಆರೋಪಿ ಪತಿ ತನ್ನ 6 ವರ್ಷದ ಅಪ್ರಾಪ್ತ ಮಗಳ ಎದುರೇ ಪತ್ನಿಗೆ ಚಾಕುವಿನಿಂದ ಇರಿದಿದ್ದಾನೆ.
ಉಮೇಶ್ ರಾಥೋಡ್ ತನ್ನ ಪತ್ನಿ ಶಾರದಾ ನಡುವೆ ಹಣದ ವಿಚಾರವಾಗಿ ಜಗಳ ನಡೆದಿದೆ. ಇದರಿಂದ ಕೋಪಗೊಂಡ ಪತಿ, ಪತ್ನಿ ಶಾರದಾ ಹೊಟ್ಟೆಗೆ ಮನೆಯಲ್ಲಿಟ್ಟಿದ್ದ ಚಾಕುವಿನಿಂದ ಇರಿದಿದ್ದಾನೆ.
ಪೊಲೀಸರ ಪ್ರಕಾರ, ಪತ್ನಿಗೆ ಚಾಕುವಿನಿಂದ ಇರಿಯುತ್ತಿರುವಾಗ ತನ್ನ 6 ವರ್ಷದ ಮಗಳು ಅಲ್ಲಿಯೇ ಇರುವುದನ್ನು ಕೂಡ ಆತ ನೋಡಿದ್ದಾನೆ. ಆಕೆಯ ಎದುರೇ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಚಂದನ್ ನಗರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಆರೋಪಿ ಉಮೇಶ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.