News Karnataka Kannada
Sunday, April 28 2024
ಚಿಕ್ಕಬಳ್ಳಾಪುರ

ಹೊಟೇಲ್‌ನಲ್ಲಿ ಮಲಗಿದ್ದವನ ಕುತ್ತಿಗೆ ಸೀಳಿ ಬರ್ಬರ ಹತ್ಯೆ : ದುಷ್ಕರ್ಮಿಗಳು ಎಸ್ಕೇಪ್‌

ರಾತ್ರಿ ಹೊತ್ತು ಹೊಟೇಲ್‌ನಲ್ಲಿ ಮಲಗಿದ್ದವನ ಚಾಕುವಿನಿಂದ ಕುತ್ತಿಗೆ ಸೀಳಿ ಬರ್ಬರ ಹತ್ಯೆ ಮಾಡಿ ದುಷ್ಕರ್ಮಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ.ಈ ಘಟನೆ ನೆ ಬಾಗೇಪಲ್ಲಿ ಪಟ್ಟಣ ಹೊರವಲಯದ ಟಿಬಿ ಕ್ರಾಸ್​ನಲ್ಲಿ ನಡೆದಿದೆ.
Photo Credit : NewsKarnataka

ಚಿಕ್ಕಬಳ್ಳಾಪುರ: ರಾತ್ರಿ ಹೊತ್ತು ಹೊಟೇಲ್‌ನಲ್ಲಿ ಮಲಗಿದ್ದವನ ಚಾಕುವಿನಿಂದ ಕುತ್ತಿಗೆ ಸೀಳಿ ಬರ್ಬರ ಹತ್ಯೆ ಮಾಡಿ ದುಷ್ಕರ್ಮಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ.ಈ ಘಟನೆ ನೆ ಬಾಗೇಪಲ್ಲಿ ಪಟ್ಟಣ ಹೊರವಲಯದ ಟಿಬಿ ಕ್ರಾಸ್​ನಲ್ಲಿ ನಡೆದಿದೆ.

ಟಿಬಿ ಕ್ರಾಸ್​ನ ಚೌಡೇಶ್ವರಿ ಹೋಟೆಲ್​ನ ಮುಂದೆ ಅಡುಗೆ ಮಾಡುವ ಜಾಗದಲ್ಲಿ ಆಂಧ್ರಪ್ರದೇಶದ ದೇಮಕೇತೇಪಲ್ಲಿಯ 58 ವರ್ಷದ ವೆಂಕಟೇಶಪ್ಪ ಎಂಬಾತ ರಾತ್ರಿ ಮಲಗಿದ್ದಾನೆ.ಆದ್ರೆ ಬೆಳಿಗ್ಗೆಯಾಗುವಷ್ಟರಲ್ಲಿ ಆತ ಬರ್ಬರವಾಗಿ ಹತ್ಯೆಯಾಗಿದ್ದು ಅಪರಿಚಿತರು ಕೃತ್ಯ ಎಸಗಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಇನ್ನು ಈ ಘಟನೆ ಸಂಬಂಧ ಚಿಕ್ಕಬಳ್ಳಾಪುರ ಎಸ್​ಪಿ ಡಿ.ಎಲ್ ನಾಗೇಶ್, ಎಎಸ್​​ಪಿ ಖಾಸಿಂ, ಡಿವೈಎಸ್ಪಿ, ಶಿವಕುಮಾರ್ ಸೇರಿದಂತೆ ಬಾಗೇಪಲ್ಲಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಬೆರಳಚ್ಚು ಶೋಧ ನಡೆಸಿ ಪರಿಶೀಲಿಸಿದ್ದಾರೆ.ನಂತರ ಮೃತದೇಹವನ್ನ ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ.ಘಟನೆ ಸಂಬಂಧ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕೊಲೆಪಾತಕರ ಶೋಧನೆ ನಡೆಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು