News Karnataka Kannada
Friday, May 10 2024
ಮಧ್ಯ ಪ್ರದೇಶ

ಕುನೋ ಪಾರ್ಕ್ ನಲ್ಲಿ ಆರು ಮರಿಗಳಿಗೆ ಜನ್ಮ ನೀಡಿದ ‘ಗಾಮಿನಿ ಚೀತಾ’

Cubs
Photo Credit : NewsKarnataka

ಮಧ್ಯಪ್ರದೇಶ: ಇತ್ತೀಚೆಗೆ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಹೆಣ್ಣು ಚೀತಾ ಗಾಮಿನಿ 5 ಅಲ್ಲ 6 ಮರಿಗಳಿಗೆ ಜನ್ಮ ನೀಡಿತ್ತು. ಮಾರ್ಚ್ 10 ರಂದು ಮರಿಗಳ ಸಂಖ್ಯೆ 5 ಎಂದು ವರದಿಯಾಗಿತ್ತು. ಆದ್ರೆ, ಇಂದು ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಅವರು ಚೀತಾ ಮರಿಗಳ ವೀಡಿಯೋವನ್ನ ಹಂಚಿಕೊಂಡಿದ್ದಾರೆ. ಇದರ ಜತೆಗೆ 6 ಮರಿಗಳಿಗೆ ಜನ್ಮ ನೀಡಿದ ದಾಖಲೆಯೂ ಗಾಮಿನಿ ಹೆಸರಿನಲ್ಲಿ ದಾಖಲಾಗಿದೆ. ಹೆಣ್ಣು ಚೀತಾ ಗಾಮಿನಿಯನ್ನ ದಕ್ಷಿಣ ಆಫ್ರಿಕಾದಿಂದ ತರಲಾಗಿದೆ.

ಈ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್, “ತುಂಬಾ ಸಂತೋಷವಾಗಿದೆ. ಇವು ಐದಲ್ಲ, ಆರು ಮರಿಗಳು! “ಗಾಮಿನಿ ಐದು ಮರಿಗಳಿಗೆ ಜನ್ಮ ನೀಡಿದ ಒಂದು ವಾರದ ನಂತರ ಮತ್ತೊಂದು ಮರಿಗೆ ಜನ್ಮ ನೀಡಿರುವುದು ಇದೀಗ ದೃಢಪಟ್ಟಿದೆ.

ಇದು ಮೊದಲ ಬಾರಿಗೆ ಈ ರೀತಿಯ ದಾಖಲೆ ನಿರ್ಮಾಣಾಗಿದೆ. ಮೊದಲ ಬಾರಿಗೆ ತಾಯಿಯಾದ ಗಾಮಿನಿ 6 ಮರಿಗಳಿಗೆ ಜನ್ಮ ನೀಡಿದ ಮೊದಲ ಹೆಣ್ಣು ಚಿರತೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ”. ಇಲ್ಲಿಯವರೆಗೆ ಗರಿಷ್ಠ ಸಂಖ್ಯೆ 5 ಮಾತ್ರ ಇತ್ತು ಎಂದು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು