ಇಂದೋರ್: ಕಾರೊಂದು ಜಲಪಾತಕ್ಕೆ ಬಿದ್ದಿರೋ ಘಟನೆ ಇಂದೋರ್ನಲ್ಲಿ ಸಂಭವಿಸಿದೆ. ಹ್ಯಾಂಡ್ ಬ್ರೇಕ್ ಹಾಕದೇ ಜಲಪಾತದ ಮೇಲೆ ಕಾರನ್ನು ನಿಲ್ಲಿಸಲಾಗಿತ್ತು.
ಇದೇ ವೇಳೆ ಕಾರು ಚಲಿಸಿದೆ. ಪರಿಣಾಮ ಕಾರು ಜಲಪಾತಕ್ಕೆ ಬಿದ್ದಿದೆ. ಕಾರಿನ ಒಳಗಡೆ ಇದ್ದ ಕುಟುಂಬವನ್ನು ಅದೇ ಜಲಪಾತದಲ್ಲಿದ್ದ ಇತರರು ತಕ್ಷಣ ರಕ್ಷಿಸಿದ್ದಾರೆ. ಇನ್ನು ಘಟನೆಯಲ್ಲಿ ಒಬ್ಬರಿಗೆ ಗಾಯವಾಗಿದೆ. ಅಮೀತ್ ಸಾಹು ಎಂಬುವವರು ಟ್ವೀಟರ್ ಅಲ್ಲಿ ಈ ದೃಶ್ಯವನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
https://twitter.com/amitsahujourno/status/1688499803297124352/video/1