ಭೋಪಾಲ್: ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಮಿಷನರಿ ಶಾಲೆಗೆ ರಾಜ್ಯ ಮಕ್ಕಳ ಹಕ್ಜುಗಳ ಆಯೋಗ ಹಠಾತ್ ದಾಳಿ ನಡೆಸಿದ್ದು, ಪ್ರಾಂಶುಪಾಲರ ಕೊಠಡಿಯಲ್ಲಿ ಮದ್ಯ ಮತ್ತು ಕಾಂಡೋಮ್ಗಳು ಪತ್ತೆಯಾದ ನಂತರ ಶಾಲೆ ಆವರಣವನ್ನು ಅಧಿಕಾರಿಗಳು ಸೀಲ್ ಮಾಡಿದ್ದಾರೆ.
ಮಕ್ಕಳ ಹಕ್ಕುಗಳ ತಂಡವು ಪ್ರಾಂಶುಪಾಲರ ಕೊಠಡಿಯಲ್ಲಿ ಹಾಸಿಗೆ, ಮದ್ಯ ಮತ್ತು ಕಾಂಡೋಮ್ಗಳು ಮತ್ತು ಮೊಟ್ಟೆಯ ಟ್ರೇ ಮತ್ತು ಗ್ಯಾಸ್ ಸಿಲಿಂಡರ್ಗಳನ್ನು ಪತ್ತೆ ಮಾಡಿದೆ. ಕೆಲವು ಆಕ್ಷೇಪಾರ್ಹ ವಸ್ತುಗಳನ್ನು ನಾವು ಪ್ರಾಂಶುಪಾಲರ ಕೊಠಡಿಯಲ್ಲಿ ಕಂಡಿದ್ದು, ಎಸ್ಸಿಪಿಸಿಆರ್ ತಪಾಸಣಾ ತಂಡದ ಸದಸ್ಯೆ ನಿವೇದಿತಾ ಶರ್ಮಾ ಈ ಬಗ್ಗೆ ಪೊಲೀಸರ ಗಮನಕ್ಕೆ ತಂದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಶಾಲೆ ಪ್ರಾಂಶುಪಾಲರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ನಾವು ತಪಾಸಣೆಗಾಗಿ ತೆರಳಿದಾಗ ಶಾಲೆಯಲ್ಲಿ ಒಂದು ಕೊಠಡಿಯಲ್ಲಿ ಮದ್ಯದ ಬಾಟಲಿಗಳು, ಕಾಂಡೋಮ್ಗಳು ಕಂಡುಬಂದವು. ಅಲ್ಲದೇ ಆ ಕೊಠಡಿಯನ್ನು ಸಂಪೂರ್ಣವಾಗಿ ವಸತಿ ವ್ಯವಸ್ಥೆಯಂತೆ ಮಾರ್ಪಾಡು ಮಾಡಲಾಗಿತ್ತು. ನಾವು ದಾಳಿ ಮಾಡಿದ ವೇಳೆ ಹಲವು ಜನರು ಅಲ್ಲಿಂದ ಹೊರಬಂದರು ಎಂದು ಮಕ್ಕಳ ಹಕ್ಕು ತಂಡದ ಸದಸ್ಯೆ ಶರ್ಮಾ ತಿಳಿಸಿದ್ದಾರೆ.