ಮಧ್ಯಪ್ರದೇಶ : ಮಧ್ಯಪ್ರದೇಶದಲ್ಲಿ 28 ವರ್ಷದ ಯುವಕನಿಗೆ 67 ವರ್ಷದ ಮಹಿಳೆ ಮೇಲೆ ಪ್ರೇಮಾಂಕುರವಾಗಿದ್ದು, ಇಬ್ಬರು ಜೊತೆಯಾಗಿರಲು ನಿರ್ಧರಿಸಿದ್ದಾರೆ. ಈ ಸಂಬಂಧ ಅನುಮತಿ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಸಾಮಾನ್ಯವಾಗಿ ದಂಪತಿ ನಡುವಿನ ವಯಸ್ಸಿನ ಅಂತರದ ಬಗ್ಗೆ ಹಲವರು ಅನೇಕ ಬಗೆಯ ವಾದಗಳನ್ನು ಮಂಡಿಸುತ್ತಾರೆ. ಮೂರರಿಂದ ನಾಲ್ಕು ವರ್ಷ ಅಂತರವಿದ್ರೆ ಒಳ್ಳೆಯದು ಅಂತಾರೆ.
ಮಧ್ಯಪ್ರದೇಶದ ಗ್ವಾಲಿಯರ್ ಮೊರೆನಾದಲ್ಲಿ ಈ ಘಟನೆ ನಡೆದಿದೆ. ಇದೇ ಗ್ರಾಮದ ನಿವಾಸಿಗಳಾದ 28 ವರ್ಷದ ಬೋಲು ಮತ್ತು 67 ವರ್ಷದ ರಾಮ್ ಕಾಲಿ ನಡುವೆ ಪ್ರೀತಿ ಹುಟ್ಟಿದ್ದು, ಇಬ್ಬರು ಜೊತೆಯಾಗಿ ಜೀವನ ನಡೆಸಲು ನಿರ್ಧರಿಸಿದ್ದಾರೆ. ಕಳೆದ ಕೆಲ ವರ್ಷಗಳಿಂದ ಇಬ್ಬರು ಪ್ರೀತಿಸುತ್ತಿದ್ದರು.
ಇನ್ನೂ ಈ ಜೊತೆಯಾಗಿ ಜೀವನ ನಡೆಸುತ್ತಿರುವ ಬಗ್ಗೆ ನೋಟರಿ ಸಹ ಪಡೆದುಕೊಂಡಿದ್ದಾರೆ. ನೋಟರಿಯಲ್ಲಿ ಮದುವೆ ಆಗುತ್ತಿಲ್ಲ. ಆದ್ರೆ ಜೊತೆಯಾಗಿರುತ್ತೇವೆ ಎಂದು ಹೇಳಿಕೊಂಡಿದ್ದಾರೆ. ಸದ್ಯ ಇಬ್ಬರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.