News Karnataka Kannada
Thursday, May 02 2024
ಮಧ್ಯ ಪ್ರದೇಶ

ಮಧ್ಯಪ್ರದೇಶ: ಮೇ ತಿಂಗಳಲ್ಲಿ ಮೃತಪಟ್ಟ ವ್ಯಕ್ತಿಗೆ ಡಿಸೆಂಬರ್ ನಲ್ಲಿ ಕೋವಿಡ್​​ ಲಸಿಕೆ

Death Body 08082021
Photo Credit :

ಭೋಪಾಲ್ : ದೇಶದಲ್ಲಿ ಕರೊನಾ ವೈರಸ್​ ರೂಪಾಂತಾರಿ ಒಮಿಕ್ರಾನ್​ ಭೀತಿ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಕೋವಿಡ್​ ಲಸಿಕೆ ನೀಡುವ ಪ್ರಕ್ರಿಯೆಗೆ ಚುರುಕು ಮುಟ್ಟಿಸಲಾಗಿದ್ದು, ಯಾರು ಇನ್ನು ಲಸಿಕೆ ಪಡೆದುಕೊಂಡಿಲ್ಲವೋ, ಅವರನ್ನು ಹುಡುಕಿ ಲಸಿಕೆ ನೀಡುವ ಕೆಲಸ ಭರದಿಂದ ಸಾಗಿದೆ. ಆದರೆ, ಲಸಿಕೆ ನೀಡುವ ಭರದಲ್ಲಿ ಮಧ್ಯಪ್ರದೇಶದ ಅಧಿಕಾರಿಗಳು ಯಡವಟ್ಟೊಂದನ್ನು ಮಾಡಿಕೊಂಡಿದ್ದಾರೆ.

ಕಳೆದ ಮೇ ತಿಂಗಳಲ್ಲಿ ಮೃತಪಟ್ಟ ವ್ಯಕ್ತಿಗೆ 2021ರ ಡಿಸೆಂಬರ್ 3ರಂದು ಎರಡನೇ ಡೋಸ್​​ ಲಸಿಕೆ ನೀಡಲಾಗಿದೆ. ಈ ಸಂಬಂಧ ಮೃತ ವ್ಯಕ್ತಿಯ ಮೊಬೈಲ್​ಗೆ ಸಂದೇಶವೊಂದು ಬಂದಿದ್ದು, ಲಸಿಕೆ ಪ್ರಮಾಣ ಪತ್ರವನ್ನು ಡೌನ್​ಲೋಡ್​ ಮಾಡಿಕೊಳ್ಳುವಂತೆ ಎಸ್​ಎಂಎಸ್​ನಲ್ಲಿ ತಿಳಿಸಲಾಗಿದೆ. ಈ ಘಟನೆ ಮಧ್ಯಪ್ರದೇಶದ ರಾಜಗಢ ಜಿಲ್ಲೆಯಲ್ಲಿ ನಡೆದಿದ್ದು, ಅಧಿಕಾರಿಗಳ ಕಾರ್ಯವೈಖರಿಗೆ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ.

ಮಧ್ಯಪ್ರದೇಶದ ಬಯೋರಾ ಪಟ್ಟಣದ ನಿವಾಸಿ ಪುರುಷೋತ್ತಮ್​ ಶಕ್ಯಾವಾರ್​ (78) ಕಳೆದ ಮೇ 8ರಂದು ಕೋವಿಡ್​ ಲಸಿಕೆಯ ಮೊದಲನೇ ಡೋಸ್​ ತೆಗೆದುಕೊಂಡಿದ್ದರು. ಆದಾಗ್ಯೂ, ಅನಾರೋಗ್ಯದಿಂದ ಬಳಲುತ್ತಿದ್ದ ಪುರುಷೋತ್ತಮ್,​ ಚಿಕಿತ್ಸೆ ಫಲಿಸದೇ ಮೇ 24ರಂದು ಇಂದೋರ್​ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಆದರೆ, ಡಿ.3ರಂದು ಮೃತ ಪುರುಷೋತ್ತಮ್​ ಮೊಬೈಲ್​ಗೆ ಸಂದೇಶವೊಂದು ಬಂದಿದ್ದು, ಎರಡನೇ ಡೋಸ್​ ಲಸಿಕೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದಾಗಿಯೂ ಮತ್ತು ಪ್ರಮಾಣ ಪತ್ರವನ್ನು ಡೌನ್​ಲೋಡ್​ ಮಾಡಿಕೊಳ್ಳುವಂತೆ ಎಸ್​ಎಂಎಸ್​ನಲ್ಲಿ ತಿಳಿಸಲಾಗಿದೆ. ಅದನ್ನು ನೋಡಿ ಕುಟುಂಬದ ಸದಸ್ಯರಿಗೆ ನಿಜಕ್ಕೂ ಶಾಕ್​ ಆಗಿದೆ.

ಇದಾದ ಬಳಿಕ ಈ ವಿಚಾರವನ್ನು ಜಿಲ್ಲಾ ಲಸಿಕಾ ಅಧಿಕಾರಿಗಳ ಗಮನಕ್ಕೆ ಮೃತನ ಕುಟುಂಬಸ್ಥರು ತಂದಿದ್ದು, ಕಂಪ್ಯೂಟರ್ ದೋಷದಿಂದ ಇದು ಸಂಭವಿಸಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ. ಈ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ. ಮತ್ತೊಂದೆಡೆ, ಲಸಿಕೆಯನ್ನು ಮೊದಲು ವಿತರಿಸಿದಾಗಿನಿಂದ ಅನೇಕ ಜನರು ತಮ್ಮ ಫೋನ್ ಸಂಖ್ಯೆಯನ್ನು ತಪ್ಪಾಗಿ ನಮೂದಿಸುತ್ತಿದ್ದಾರೆ ಎಂದು ಬಯೋರಾ ಬ್ಲಾಕ್ ವೈದ್ಯಕೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ, ಇದು ಕೂಡ ಈ ರೀತಿಯ ಯಡವಟ್ಟಿಗೆ ಒಂದು ಕಾರಣವಾಗಿರಬಹುದು ಎಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು