ಲಡಾಖ್ : ದೇಶದ ಅತಿ ಎತ್ತರದ ಟಿವಿ, ರೇಡಿಯೋ ಹೈ ಪವರ್ ಟ್ರಾನ್ಸ್’ಮೀಟರ್ ಗಳನ್ನು ಲಡಾಖ್ನ ಕಾರ್ಗಿಲ್ ಬಳಿಯ ಹಂಬೋಟಿಂಗ್ ಲಾದಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಲೋಕಾರ್ಪಣೆಗೊಳಿಸಿದರು.
ದೂರದರ್ಶನ್ ಮತ್ತು ಆಲ್ ಇಂಡಿಯಾ ರೇಡಿಯೊದ(ಎಐಆರ್)ನ ಹೈ ಪವರ್ 10 ಕಿಲೋವ್ಯಾಟ್ ಟ್ರಾನ್ಸ್’ಮೀಟರ್ ಗಳು ಸಮುದ್ರ ಮಟ್ಟಕ್ಕಿಂತ 4054 ಮೀಟರ್ (ಸುಮಾರು 13,300 ಅಡಿ) ಎತ್ತರದಲ್ಲಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಇದರಿಂದ ಗಡಿ ಪ್ರದೇಶಗಳಲ್ಲಿನ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಿಷಯ ಡಿಡಿ ಮತ್ತು ಎಐಆರ್ ಮೂಲಕ ಲಭ್ಯವಾಗಲು ಸಹಾಯವಾಗಲಿದೆ ಎಂದು ಸಚಿವರು ತಿಳಿಸಿದರು. ಇಂತಹ ಪ್ರತಿಕೂಲ ವಾತಾವರಣದಲ್ಲಿ ಯೋಜನೆಯನ್ನು ಪೂರ್ಣಗೊಳಿಸಿದ ಎಂಜಿನಿಯರ್ಗಳು ಮತ್ತು ಕಾರ್ಮಿಕರನ್ನು ಠಾಕೂರ್ ಶ್ಲಾಘಿಸಿದರು.
ದೂರದರ್ಶನ ಕಾಶ್ಮೀರಕ್ಕೆ ಲಡಾಖಿ ಕೊಡುಗೆಯ ಪ್ರಸಾರವನ್ನು ಅಕ್ಟೋಬರ್ 1 ರಿಂದ ಪ್ರತಿದಿನ 30 ನಿಮಿಷದಿಂದ ಒಂದು ಗಂಟೆಗೆ ದ್ವಿಗುಣಗೊಳಿಸಲಾಗುವುದು ಎಂದು ಸಚಿವರು ಹೇಳಿದರು. ಪ್ರಸಾರ ಭಾರತಿ 160 ಚಾನೆಲ್ಗಳನ್ನು ವಿವಿಧ ಪ್ರಕಾರಗಳಲ್ಲಿ ಲಭ್ಯವಾಗುವಂತೆ ಮಾಡುತ್ತಿದೆ. ಇದರಲ್ಲಿ ವಾರ್ತೆಗಳು, ಮನರಂಜನೆ, ಶಿಕ್ಷಣ ಮತ್ತು 48 ರೇಡಿಯೋ ಚಾನೆಲ್ಗಳು ಡಿಡಿ ಫ್ರೀ ಡಿಶ್ ಮನೆಗಳಿಗೆ ಉಚಿತವಾಗಿ ಲಭ್ಯವಿದೆ, ಮತ್ತು ಮಾಹಿತಿ ಪ್ರಸಾರ ಸಚಿವಾಲಯ ಹೇಳಿದೆ.