News Karnataka Kannada
Thursday, May 02 2024
ಮಂಗಳೂರು

ಯಮುನಾ ಡಿ ಅವರಿಗೆ ವಿದಾಯ

Retiremnet Function Of Yamuna D
Photo Credit :

ಮಂಗಳೂರು:  ಕರ್ನಾಟಕ ಸರಕಾರದ ದಕ್ಷಿಣ ಕನ್ನಡ ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ಜಿಲ್ಲಾ ಸಬಲೀಕರಣ ಅಧಿಕಾರಿಯಾಗಿದ್ದು ಕೊಂಡು ಇದೀಗ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಸಂರಕ್ಷಣಾ ಘಟಕದ ಅಧಿಕಾರಿಯಾಗಿ ವರ್ಗಾವಣೆ ಹೊಂದಿದ ಶ್ರೀಮತಿ ಯಮುನಾ ಡಿ ಇವರಿಗೆ ಮಂಗಳೂರಿನ ಸೈಂಟ್ ಆಗ್ನೆಸ್ ಸ್ಪೆಷಲ್ ಸ್ಕೂಲ್ ಇದರ ಸಭಾಭವನದಲ್ಲಿ ವಿದಾಯ ಸಮಾರಂಭವನ್ನು ಏರ್ಪಡಿಸಲಾಗಿತ್ತು.ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ವಿಶೇಷ ಶಾಲೆಗಳ ಮುಖ್ಯಸ್ಥರ ಹಾಗೂ ವಿಶೇಷ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳ, ದಕ್ಷಿಣ ಕನ್ನಡ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಿಬ್ಬಂದಿಯವರ, ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರ ಹಾಗೂ ಎಂ ಆರ್ ಡಬ್ಲ್ಯೂ, ವಿ ಆರ್ ಡಬ್ಲ್ಯೂ, ಇವರೆಲ್ಲರ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮವನ್ನು ಸಂಘಟಿಸಲಾಯಿತು.
ಶ್ರೀಮತಿ ಯಮುನಾ ಡಿ ಅವರ ಬಗ್ಗೆ ಸಾನಿಧ್ಯ ಶಾಲೆಯ ಡಾ. ವಸಂತ್ ಕುಮಾರ್ ಶೆಟ್ಟಿ, ಸ್ಪೂರ್ತಿ ವಿಶೇಷ ಶಾಲೆಯ ಶ್ರೀ ಪ್ರಕಾಶ್, ಲಯನ್ಸ್ ವಿಶೇಷ ಶಾಲೆಯ ಶ್ರೀಮತಿ ಮೀರಾ ಸತೀಶ್, ಸಾಂದೀಪ ವಿಶೇಷ ಶಾಲೆ ಸುಳ್ಯ ಇಲ್ಲಿನ ಶ್ರೀಮತಿ ಹರಿಣಿ ಸದಾಶಿವ ಇವರೆಲ್ಲರೂ ಗುಣಗಾನ ಮಾಡಿದರು.
ಬಳಿಕ ಎಲ್ಲ ವಿಭಾಗದಿಂದಲೂ ಶ್ರೀಮತಿ ಯಮುನಾ ಡಿ ರವರನ್ನು ಅಭಿನಂದಿಸಲಾಯಿತು.
ಅಭಿನಂದನೆಗೆ ಉತ್ತರಿಸಿದ ಶ್ರೀಮತಿ ಯಮುನಾ ಡಿ ಅವರು ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣಕ್ಕಾಗಿ ಶಕ್ತಿಮೀರಿ ಪ್ರಯತ್ನಿಸಿದ್ದೇನೆ. ರಾಜ್ಯದಲ್ಲಿ ಈ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ವಿಕಲಚೇತನರ ಸೇವೆಯಲ್ಲಿ ಪ್ರಥಮ ಸ್ಥಾನದಲ್ಲಿ ಇರಬೇಕೆಂಬುದು ನನ್ನ ಹಂಬಲ. ಆ ರೀತಿ ಗುರಿಯನ್ನು ಇರಿಸಿಕೊಂಡು ಓರ್ವ ಸರಕಾರಿ ಅಧಿಕಾರಿಯಾಗಿ ನನ್ನ ಕೆಲಸವನ್ನು ನಿರ್ವಹಿಸಿದ್ದೇನೆ. ನನ್ನ ಕೆಲಸವನ್ನು ನಿರ್ವಹಿಸಲು ನನ್ನ ಇಲಾಖೆ ಯ ಸಿಬ್ಬಂದಿ, ವಿಶೇಷ ಶಾಲೆಗಳ ಮುಖ್ಯಸ್ಥರು, ವಿ ಆರ್ ಡಬ್ಲ್ಯೂ, ಎಂ ಆರ್ ಡಬ್ಲ್ಯೂ, ಸಿಡಿಪಿಓ, ಎಲ್ಲರೂ ಸಹಕಾರವನ್ನು ನೀಡಿದ್ದೀರಿ. ಮತ್ತೊಮ್ಮೆ ನಿಮಗೆಲ್ಲರಿಗೂ ನನ್ನ ಹೃದಯಪೂರ್ವಕ ಅಭಿನಂದನೆಗಳು. ಎಂದು ಹೇಳಿದರು.
ಚೇತನ ವಿಶೇಷ ಶಾಲೆಯ ಶಿಕ್ಷಕ ವೃಂದ ಪ್ರಾರ್ಥನೆಯನ್ನು ನಡೆಸಿಕೊಟ್ಟರು. ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರ ಮತ್ತು ಶಿಕ್ಷಕೇತರರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷೆ ಶ್ರೀಮತಿ ರೇಷ್ಮಾ ಸೆರಾವೋ ಕಾರ್ಯಕ್ರಮ ನಿರೂಪಿಸಿದರು. ಸೆಂಟ್ ಆಗ್ನೆಸ್ ವಿಶೇಷ ಶಾಲೆಯ ಪ್ರಾಂಶುಪಾಲೆ ಸಿ| ಮರಿಯ ಶೃತಿ ಅವರು ಸ್ವಾಗತಿಸಿದರು. ಕ್ರಿಸ್ತ ರಾಜ ನವಚೇತನ ವಿಶೇಷ ಶಾಲೆ ವೇಣೂರು ಇಲ್ಲಿನ ಪ್ರಾಂಶುಪಾಲೆ
ಸಿ| ಶಾಲೆಟ್ ಪಿಂಟೋ ವಂದಿಸಿದರುಶ್ರೀಮತಿ ಯಮುನಾ ಡಿ ರವರು ಎಲ್ಲರಿಗೂ ಭೋಜನದ ವ್ಯವಸ್ಥೆಯನ್ನು ಮಾಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು