News Karnataka Kannada
Monday, April 29 2024
ಕೇರಳ

ಚಿಕನ್ ಶವರ್ಮಾ ತಿಂದು ಸಾವನ್ನಪ್ಪಿದ ಯುವಕ

Young man dies after eating chicken shawarma
Photo Credit : News Kannada

ಕೊಚ್ಚಿ: ಆನ್​ಲೈನ್​ ಮೂಲಕ ಆರ್ಡರ್​ ಮಾಡಿದ್ದ ಚಿಕನ್ ಶವರ್ಮಾ ತಿಂದು ಯುವಕ ಸಾವನ್ನಪ್ಪಿರುವ ಘಟನೆ ಕೇರಳದ ಕೊಚ್ಚಿ ನಗರದಲ್ಲಿ ನಡೆದಿದೆ.

ಕೊಟ್ಟಾಯಂ ಮೂಲದ ರಾಹುಲ್​ ನಾಯರ್ (24) ಸಾವನ್ನಪ್ಪಿದ ಯುವಕ. ಆನ್​ಲೈನ್ ಮೂಲಕ “ಲೇ ಹಯಾತ್​ ರೆಸ್ಟೋರೆಂಟ್”​ನಿಂದ ಚಿಕನ್ ಶವರ್ಮಾ ಆಹಾರವನ್ನು ತರಿಸಿಕೊಂಡಿದ್ದಾನೆ. ಅದನ್ನು ತಿಂದ ಬಳಿಕ ಇದ್ದಕ್ಕಿದ್ದಾಗೆ ಆರೋಗ್ಯ ಹದಗೆಟ್ಟಿದೆ. ಬಳಿಕ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದ. ಆದರೆ ಹೊಟ್ಟೆ ನೋವು ಹೆಚ್ಚಾಗಿ ಮತ್ತೇ ರಾಹುಲ್‌ ನಾಯರ್‌ ಆಸ್ಪತ್ರೆಗೆ ದಾಖಲಾಗಿದ್ದಾನೆ. ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿ ರಿಲೀಸ್ ಮಾಡಿರುವ ಹೆಲ್ತ್ ಬುಲೆಟಿನ್ ಅಲ್ಲಿ ಯುವಕನ ಕಿಡ್ನಿ ಹಾಗೂ ಲೀವರ್ ಹಾನಿಯಾಗಿದ್ದು ಹೃದಯಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಾರೆ. ಆದರೆ ಅವರಿಗೆ ದೇಹದಲ್ಲಿ ವಿಷ ಸೇರಿರುವುದು ಗೊತ್ತಾಗಿದೆ. ಇದು ಚಿಕನ್ ಶವರ್ಮಾ ಪದಾರ್ಥದಿಂದ ಆಗಿದಿಯೋ ಅಥವಾ ಬೇರೆ ಆಹಾರದಿಂದ ಆಗಿದಿಯೋ ಅನ್ನೋದು ತನಿಖೆಯಿಂದ ಗೊತ್ತಾಗಬೇಕಿದೆ ಎಂದು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು