News Karnataka Kannada
Monday, April 29 2024
ವಿಶೇಷ

ದಾಳಿಂಬೆ ಕೃಷಿಯ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

Some information about pomegranate cultivation
Photo Credit : Pixabay

ಪೋಮೊಗ್ರಾನೆಟ್ ಇಂದು ಆಂಗ್ಲ ಭಾಷೆಯಲ್ಲಿ ಕರೆಯಲ್ಪಡುವ ದಾಳಿಂಬೆಯು ‘ಲಿತ್ರೈಸಿ’ ಕುಟುಂಬಕ್ಕೆ ಸೇರಿದೆ. ಇದು ಭಾರತದ ವಾಣಿಜ್ಯ ಹಣ್ಣಿನ ಬೆಳೆಗಳಲ್ಲಿ ಒಂದಾಗಿದೆ. ಇದು ಇರಾನ್ನ ಸ್ಥಳಿಯ ಬೆಳೆಯಾಗಿದ್ದು, ಈ ಹಣ್ಣನ್ನು ಬರ ಸಹಿಷ್ಣುತ ಬೆಳೆ ಎಂದು ಕರೆಯಲಾಗುತ್ತದೆ ಯಾಕೆಂದರೆ ಬರ ಪರಿಸ್ಥಿತಿಯಲ್ಲೂ ಸಹ ಇದನ್ನು ಬೆಳೆಸಬಹುದಾಗಿದೆ ಆದರೂ ವಾಣಿಜ್ಯ ಇಳುವರಿ ಉತ್ಪಾದನೆಗೆ ನಿಯಮಿತ ನೀರಾವರಿ ಕಡ್ಡಾಯವಾಗಿದೆ.

ದಾಳಿಂಬೆಯ ರುಚಿಕರ ಹಣ್ಣಿಗಾಗಿ ಕೆಲವು ಉತ್ತಮ ತಳಿಗಳನ್ನು ಸಹ ಅಭಿವೃದ್ಧಿಪಡಿಸಲಾಗಿದೆ. ಈ ಹಣ್ಣಿನ ಗಿಡಗಳು 15 ಅಡಿಗಳ ವರೆಗೆ ಬೆಳೆಯುತ್ತವೆ ಇವುಗಳಲ್ಲಿ ಹೂಗಳು ಕೆಂಪು ಅಥವಾ ಹಳದಿ ಬಣ್ಣದಲ್ಲಿದ್ದು ಗೊಂಚಲಿನಲ್ಲಿ 2ರಿಂದ 4ರಂತೆ ಇರುತ್ತದೆ. ಹಣ್ಣಿನ ಗಾತ್ರವು ತಳಿಯನ್ನು ಆಧರಿಸಿ 10 ರಿಂದ 20 ಸೆಂಟಿಮೀಟರ್ ದಪ್ಪವಿರುತ್ತದೆ.

ದಾಳಿಂಬೆಯು ಮಧ್ಯಪೂರ್ವ ದಕ್ಷಿಣ ಏಷ್ಯಾ ಮತ್ತು ಮೆಡಿಟರೇನಿಯನ್ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ಹಾಗೂ ಕ್ಯಾಲಿಫೋರ್ನಿಯ ದ ಒಣ ಹವೆಗಳಲ್ಲಿಯೂ ದಾಳಿಂಬೆಯನ್ನು ಬೆಳೆಸಲಾಗುತ್ತದೆ.

ದಾಳಿಂಬೆ ತೋಟಕ್ಕೆ ಸೂಕ್ತವಾದ ಹವಾಮಾನ: ದಾಳಿಂಬೆ ತೋಟವು ಶುಷ್ಕ ವಾತಾವರಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತದೆ ಹಣ್ಣಿನ ಬೆಳವಣಿಗೆ ಸಮಯದಲ್ಲಿ ದೀರ್ಘಕಾಲದ ಬಿಸಿ ಮತ್ತು ಶುಷ್ಕ ವಾತಾವರಣದ ಅಗತ್ಯವಿರುತ್ತದೆ ಹಣ್ಣಿನ ಬೆಳವಣಿಗೆ ಸೂಕ್ತವಾದ ತಾಪಮಾನವು 38 ಡಿಗ್ರಿ ಸೆಲ್ಸಿಯಸ್ ಆಗಿದೆ. ಆರ್ದ್ರ ಪ್ರದೇಶಗಳಲ್ಲಿ ಶಿಲೀಂದ್ರ ರೋಗಗಳಿಂದ ಬೇರು ಕೊಳೆಯು ಸಾಧ್ಯತೆಗಳಿವೆ.

ದಾಳಿಂಬೆ ತೋಟಕ್ಕೆ ಮಣ್ಣಿನ ಪ್ರಕಾರ: ದಾಳಿಂಬೆ ಹಣ್ಣು ವಿವಿಧ ರೀತಿಯ ಮಣ್ಣಿನಲ್ಲಿ ಬೆಳೆಯುತ್ತದೆ. ಸ್ವಲ್ಪ ಮಟ್ಟಿಗೆ ಕ್ಷಾರ ಮತ್ತು ಲವಣಾಂಶವನ್ನು ಸಹಿಸಿಕೊಳ್ಳಬಲ್ಲದು. ಅದಾಗಿಯೂ ಆಳವಾದ ಭಾರಿ ಲೋನ್ ಮತ್ತು ಚೆನ್ನಾಗಿ ಬರೆದು ಹೋದ ಮಣ್ಣಿನಲ್ಲಿ ಉತ್ತಮ ಫಸಲನ್ನು ನೀಡುತ್ತದೆ.

ದಾಳಿಂಬೆ ಗಿಡಗಳ ನಾಟಿ ಸಮಯ: ದಾಳಿಂಬೆ ಗಿಡಗಳನ್ನ ಸಾಮಾನ್ಯವಾಗಿ ಫೆಬ್ರವರಿ ಮಾರ್ಚ್ ಮತ್ತು ಜುಲೈ ಆಗಸ್ಟ್ ನಲ್ಲಿ ಕ್ರಮವಾಗಿ ಉಪ ಉಷ್ಣವಲಯ ಮತ್ತು ಉಷ್ಣವಲಯದ ಪ್ರದೇಶಗಳಲ್ಲಿ ಮಾಡಲಾಗುತ್ತದೆ. ದಾಳಿಂಬೆ ಏರ್ ಲೇಯರ್ ಇಂಗ್ ಅನ್ನು ಸಾಮಾನ್ಯವಾಗಿ ಮಳೆಗಾಲ ಮತ್ತು ನವೆಂಬರ್ ಡಿಸೆಂಬರ್ ನಲ್ಲಿ ಮಾಡಲಾಗುತ್ತದೆ.

ದಾಳಿಂಬೆ ಗಿಡಗಳಿಗೆ ನೀರಾವರಿ ಪೂರೈಕೆ: ಮಣ್ಣು ಹವಾಮಾನ ಮತ್ತು ನೀರಿನ ಲಭ್ಯತೆಯನ್ನು ಅವಲಂಬಿಸಿ ದಾಳಿಂಬೆ ಗಿಡಗಳಿಗೆ ನೀರಾವರಿ ನೀಡಬಹುದು ಮೊದಲ ನೀರಾವರಿಯನ್ನು ಮೇ ಮಧ್ಯದಲ್ಲಿ ಹಾಗೂ ನಂತರದ ನೀರಾವರಿಯನ್ನು ಮಾನ್ಸೂನ್ ಪ್ರಾರಂಭವಾಗುವವರೆಗೂ ನಿಯಮಿತ ನೀರಾವರಿ ಮಾಡಬೇಕಾಗುತ್ತದೆ ಬೇಸಿಗೆಯಲ್ಲಿ ವಾರಕ್ಕೊಮ್ಮೆ ನೀರಾವರಿ ಮತ್ತು ಚಳಿಗಾಲದಲ್ಲಿ 15 ದಿನಗಳ ಮಧ್ಯಂತರದಲ್ಲಿ ಶಿಫಾರಸ್ಸು ಮಾಡಲಾಗುತ್ತದೆ.

ದಾಳಿಂಬೆ ಗಿಡಗಳ ಅಂತರ ಬೇಸಾಯ: ಕಡಿಮೆ ಬೆಳೆಯುವ ತರಕಾರಿಗಳು, ದ್ವಿದಳ ಧಾನ್ಯಗಳು, ಅಥವಾ ಹಸಿರು ಗೊಬ್ಬರದ ಬೆಳೆಯೊಂದಿಗೆ ಅಂತರ ಬೆಳೆ ಲಾಭದಾಯಕವಾಗಿದೆ ಮಳೆಗಾಲದಲ್ಲಿ ಮಾತ್ರ ಅಂತರ ಬೆಳೆಯಲು ಸಾಧ್ಯ.

ದಾಳಿಂಬೆ ಹಣ್ಣಿನ ಆರೋಗ್ಯ ಪ್ರಯೋಜನಗಳು: ದಾಳಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ, ವಿಟಮಿನ್ ಎ, ವಿಟಮಿನ್ ಇ, ಪೋಲಿಕ್ ಆಮ್ಲ, ಆಂಟಿ ಆಕ್ಸಿಡೆಂಟ್, ಆಂಟಿವೈರಲ್ ಗುಣಗಳಿದ್ದು ಮನುಷ್ಯನ ದೇಹವನ್ನ ಅನೇಕರುಗಳಿಂದ ರಕ್ಷಿಸುತ್ತದೆ ಇದರ ಇನ್ನೂ ಕೆಲವು ಆರೋಗ್ಯ ಗುಣಗಳನ್ನು ನೋಡೋಣ.

# ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ

# ರಕ್ತವನ್ನು ತಿಳುಗೊಳಿಸುತ್ತದೆ

# ಚರ್ಮವನ್ನು ಬಿಳುಪಾಗಿಸುತ್ತದೆ

# ಹೃದಯದ ಆರೋಗ್ಯವನ್ನು ಕಾಪಾಡುತ್ತದೆ

# ಮಧುಮೇಹವನ್ನು ನಿರ್ವಹಣೆ ಮಾಡುತ್ತದೆ

# ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
25278

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು