News Karnataka Kannada
Sunday, May 05 2024
ಕೇರಳ

ಸೈನಿಕನ ಬೆನ್ನಿನ ಮೇಲೆ ಪಿಎಫ್‌ಐ ಸಂಘಟನೆ ಹಲ್ಲೆ: ಇಲ್ಲಿದೆ ನೋಡಿ ಅಸಲಿ ಕಹಾನಿ

PFI attack soldier's back: Here's the real Kahani
Photo Credit : News Kannada

ಕೊಲ್ಲಂ: ನಿಷೇಧಿತ ಪಿಎಫ್‌ಐ ಸಂಘಟನೆ ಕಾರ್ಯಕರ್ತರು ಕೇರಳದ ಕೊಲ್ಲಂನಲ್ಲಿ ಯೋಧನನ್ನು ಅಪಹರಿಸಿ ಬೆನ್ನಿನ ಮೇಲೆ ಪಿಎಫ್‌ಐ ಎಂದು ಪೇಂಟ್‌ ನಿಂದ ಬರೆದಿದ್ದ ವಿಚಾರ ದೇಶದೆಲ್ಲೆಡೆ ಸುದ್ದಿಯಾಗಿತ್ತು. ಆದರೆ ಆ ಸುದ್ದಿಯ ಅಸಲಿಯತ್ತನ್ನು ಪೊಲೀಸರು ಇದೀಗ ಬೇಧಿಸಿದ್ದು, ದಿಢೀರ್‌ ಹೆಸರು ಗಳಿಸಬೇಕು ಎಂಬ ಉದ್ದೇಶದಿಂದ ಸೈನಿಕ ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.

ಆರು ಮಂದಿ ಕಿಡಿಗೇಡಿಗಳು ತನ್ನನ್ನು ಅಪಹರಿಸಿ, ನಿರ್ಧಯವಾಗಿ ಥಳಿಸಿ ಬೆನ್ನಿನ ಮೇಲೆ ಪಿಎಫ್‌ ಐ ಎಂದು ಬರೆದಿರುವುದಾಗಿ ದೂರು ನೀಡಿದ್ದ ಯೋಧ ಹಲ್ವೀಲ್‌ ಶೈನ್‌ ಕುಮಾರ್‌ ಹಾಗೂ ಗೆಳೆಯನನ್ನು ವಶಪಡೆದುಕೊಳ್ಳಲಾಗಿತ್ತು. ವಿಚಾರಣೆ ವೇಳೆ ಯೋಧ ಮತ್ತು ಆತನ ಗೆಳೆಯ ಭಾರೀ ಹೆಸರುಗಳಿಸಬೇಕು ಎಂಬ ಉದ್ದೇಶದಿಂದ ಈ ನಾಟಕ ಮಾಡಿರುವುದು ಬಯಲಾಗಿದೆ.

ಇಡೀ ನಾಟಕದ ಸೂತ್ರಧಾರಿ ಶೈನ್‌ ಕುಮಾರ್‌ ಎಂಬುದಾಗಿ ಆತನ ಗೆಳೆಯ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾನೆ. ಗೆಳೆಯನ ಮನೆಯಲ್ಲಿ ಹಸಿರು ಪೈಂಟ್‌, ಬ್ರಷ್‌ ಹಾಗೂ ಟೇಪ್‌ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಡಿಎಫ್‌ಐ ಅಲ್ಲ ಪಿಎಫ್‌ ಐ ಎಂದು ಬರೆಯುವಂತೆ ಹೇಳಿದ್ದ: ಕುಮಾರ್‌ ಮನೆಯ ಸಮೀಪದ ರಬ್ಬರ್‌ ತೋಟದೊಳಗೆ ಹೋಗಿ ಬೆನ್ನಿನ ಮೇಲೆ ಪಿಎಫ್‌ ಐ ಎಂದು ಬರೆದು, ಥಳಿಸುವಂತೆ ಗೆಳೆಯನಿಗೆ ಸೂಚನೆ ನೀಡಿದ್ದ. ಈ ಸಂದರ್ಭದಲ್ಲಿ ಗೆಳೆಯ ಮದ್ಯದ ಅಮಲಿನಲ್ಲಿದ್ದು, ಆರಂಭದಲ್ಲಿ ಡಿಎಫ್‌ ಐ ಅಂತ ಬರೆದಿದ್ದ, ಆದರೆ ಕುಮಾರ್‌ ಪಿಎಫ್‌ ಐ ಎಂದು ಬರೆಯುವಂತೆ ಸೂಚಿಸಿದ್ದ. ನಂತರ ತನಗೆ ಹೊಡೆಯುವಂತೆ ಹೇಳಿದ್ದ. ಮದ್ಯ ಸೇವಿಸಿದ್ದರಿಂದ ತನಗೆ ಹೊಡೆಯಲು ಆಗಲಿಲ್ಲ. ಆಗ ಕುಮಾರ್‌ ನೆಲದ ಮೇಲೆ ಹಾಕಿ ಎಳೆದೊಯ್ಯುವಂತೆ ಹೇಳಿದ. ಅದೂ ಕೂಡಾ ತನ್ನಿಂದ ಸಾಧ್ಯವಾಗಲಿಲ್ಲ. ಕೊನೆಗೆ ಕೈಯನ್ನು ಹಿಂದಕ್ಕೆ ಕಟ್ಟಿ, ಬಾಯಿಗೆ ಟೇಪ್‌ ಹಾಕಿ ತೆರಳುವಂತೆ ಹೇಳಿದ್ದ ಎಂಬುದಾಗಿ ಗೆಳೆಯ ಪೊಲೀಸರಿಗೆ ವಿವರಣೆ ನೀಡಿದ್ದಾನೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು