ಕೊಚ್ಚಿ: ಮಾಲಿವುಡ್ ಸಿನಿರಂಗದ ಖ್ಯಾತ ನಟಿ ಲಕ್ಷ್ಮಿಕಾ ಸಜೀವನ್ (24) ಹಠಾತ್ ಹೃದಯಾಘಾತದಿಂದ ಯುನೈಟೆಡ್ ಅರಬ್ ಎಮಿರೇಟ್ಸ್ನ ಶಾರ್ಜಾದಲ್ಲಿ ಶುಕ್ರವಾರ(ಡಿ.8 ರಂದು) ನಿಧನರಾಗಿದ್ದಾರೆ. ಮಾಲಿವುಡ್ ರಂಗಕ್ಕೆ ಆಘಾತನ್ನುಂಟು ಮಾಡಿದೆ.
ಶಾರ್ಜಾದಲ್ಲಿರುವ ಬ್ಯಾಂಕ್ ವೊಂದರಲ್ಲಿ ಇದ್ದಾಗ ಅವರಿಗೆ ಹಠಾತ್ ಹೃದಯಾಘಾತವಾಗಿದೆ. ಮಾಲಿವುಡ್ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದ ಅವರು, ʼಕಾಕ್ಕʼ ಎನ್ನುವ ಕಿರುಚಿತ್ರದಲ್ಲಿ ಪಂಚಮಿ ಪಾತ್ರವನ್ನು ಮಾಡಿ ಗಮನ ಸೆಳೆದಿದ್ದರು.
ಅವರು ಪೂಜ್ಯಮ್ಮ, ಪಂಚವರ್ಣತಥಾ, ಸೌದಿ ವೆಲ್ಲಕ್ಕ, ಉಯರೆ, ಒರು ಕುಟ್ಟನಾಡನ್ ಬ್ಲಾಗ್, ಒರು ಯಮಂದನ್ ಪ್ರೇಮಕಥಾ, ನಿತ್ಯಹರಿತ ನಾಯಗನ್, ಮುಂತಾದ ಸಿನಿಮಾದಲ್ಲಿ ಅವರು ನಟಿಸಿದ್ದರು. ಕೊನೆಯ ಬಾರಿ ಅವರು, 2021 ರಲ್ಲಿ ತೆರೆಕಂಡ ʼಕೂನ್ʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.