ಕೊಚ್ಚಿ: ಮಂಡಳ-ಮಕರವಿಳಕ್ಕು ಯಾತ್ರೆ ಪ್ರಾರಂಭವಾದ ಹಿನ್ನೆಲೆಯಲ್ಲಿ ದಕ್ಷಿಣ ಭಾರತ ಅತ್ಯಂತ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕೇರಳದ ಶಬರಿಮಲೆ ಆಯ್ಯಪ್ಪ ಸ್ವಾಮಿ ದೇವಸ್ಥಾನದ ಬಾಗಿಲು ತೆರೆಯಲಾಗಿದೆ. ದೇವಾಲಯದ ‘ತಂತ್ರಿ’ ಕಂದರಾರು ಮಹೇಶ್ ಮೋಹನರು ನೇತೃತ್ವದಲ್ಲಿ ಅಯ್ಯಪ್ಪ ಸ್ವಾಮಿಯ ಗರ್ಭಗುಡಿಯನ್ನು ತೆರೆಯಲಾಗಿದೆ.
ತೀರ್ಥಯಾತ್ರೆ ಮೂಲಕ ದೊಡ್ಡ ಸಂಖ್ಯೆಯಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಆಗಮಿಸುವುದರಿಂದ ಸಾಲುಗಳನ್ನು ನಿಯಂತ್ರಿಸಲು ಸಿಬ್ಬಂದಿ ನೇಮಕ ಕೂಡ ಮಾಡಲಾಗಿದೆ. ಈಗಾಗಲೇ ದೇವರ ದರ್ಶನ ಪಡೆಯಲು ಸಾವಿರಾರು ಭಕ್ತರು ಆಗಮಿಸಿದ್ದು ಸರತಿ ಸಾಲಿನಲ್ಲಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುತ್ತಿದ್ದಾರೆ.
ಮಲಯಾಳಂ ಕ್ಯಾಲೆಂಡರ್ ಪ್ರಕಾರ 41 ದಿನಗಳ ಕಾಲ ದೇಗುಲದಲ್ಲಿ ಮಂಡಲ ಪೂಜೆ ಹಾಗೂ ಮಕರವಿಳಕ್ಕು ಯಾತ್ರೆ ಆರಂಭವಾಗಲಿದೆ. ಜನವರಿ 15ರ ಮಕರ ಸಂಕ್ರಮಣ ದಿನದಂದು ಮಕರವಿಳಕ್ಕು ನೆರವೇರಲಿದ್ದು, ದೇಶದಾದ್ಯಂತ ಲಕ್ಷಾಂತರು ಭಕ್ತರು ಶಬರಿಮಲೆಗೆ ಭೇಟಿ ನೀಡಿ ದರ್ಶನ ಪಡೆಯಲಿದ್ದಾರೆ.