News Karnataka Kannada
Wednesday, May 08 2024
ಕೇರಳ

ಕೇರಳದಲ್ಲಿ ತಮ್ಮ ಪಕ್ಷ ಎರಡಂಕಿ ಸೀಟು ಪಡೆಯಲಿದೆ ಎಂದ ಪ್ರಧಾನಿ

ಕರ್ನಾಟಕದ 14 ಕ್ಷೇತ್ರಗಳಲ್ಲಿಯೂ ಮತದಾನ ನಡೆಯುತ್ತಿರುವುದರಿಂದ ಸಾಮಾಜಿಕ ಮಾಧ್ಯಮ ಎಕ್​​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲಿಯೇ ಸಂದೇಶ ಪ್ರಕಟಿಸಿದ್ದಾರೆ.
Photo Credit : News Kannada

ಪತ್ತನಂತಿಟ್ಟ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕೇರಳದಲ್ಲಿ ತಮ್ಮ ಪಕ್ಷ ಎರಡಂಕಿ ಸೀಟು ಪಡೆಯಲಿದೆ  ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.

ಪತ್ತನಂತಿಟ್ಟದಲ್ಲಿ ಬಿಜೆಪಿ ಅಭ್ಯರ್ಥಿ ಅನಿಲ್ ಆ್ಯಂಟನಿ ಪರ ಪ್ರಚಾರ ಕಾರ್ಯಕ್ರಮವನ್ನುದ್ದೇಶಿಸಿ ಮಲಯಾಳಂನಲ್ಲಿ ಭಾಷಣ ಆರಂಭಿಸಿ ಮಾತನಾಡಿದ ಅವರು, ಈ ಬಾರಿ ಕೇರಳದಲ್ಲಿ ಕಮಲ ಅರಳಲಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕೇರಳದಿಂದ ಬಿಜೆಪಿ ಸೀಟುಗಳನ್ನು ಗೆಲ್ಲಲಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 400 ಸೀಟುಗಳನ್ನು ಗೆಲ್ಲುವ ಭರವಸೆ ಇದೆ  ಎಂದು ಮೋದಿ ಹೇಳಿದ್ದಾರೆ.

ರಾಜ್ಯದ ಜನರು ಭ್ರಷ್ಟ ಮತ್ತು ಅಸಮರ್ಥ ಸರ್ಕಾರದಿಂದ ಬಳಲುತ್ತಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಎಡಪಕ್ಷ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಭ್ರಷ್ಟಾಚಾರ ಮತ್ತು ಅದಕ್ಷತೆಯಿಂದ ಪೀಡಿತ ಸರ್ಕಾರಗಳ ಅಡಿಯಲ್ಲಿ ರಾಜ್ಯದ ಜನರು ಕಷ್ಟಗಳನ್ನು ಸಹಿಸಿಕೊಂಡಿದ್ದಾರೆ ಎಂದಿದ್ದಾರೆ.

ಕಳೆದ 10 ವರ್ಷಗಳಲ್ಲಿ, ನಾವು ಪ್ರತಿ ಪ್ರದೇಶದ ಪ್ರತಿಯೊಂದು ವರ್ಗದ ಜನರಿಗೆ ಸಾಧ್ಯವಾದಷ್ಟು ಎಲ್ಲಾ ಪ್ರಯತ್ನಗಳನ್ನು ಮಾಡಿದ್ದೇವೆ. ನಾವು ಯುದ್ಧದಲ್ಲಿ ಸಿಲುಕಿಕೊಂಡಿದ್ದ ಇರಾಕ್‌ನಿಂದ ನರ್ಸ್​​​ಗಳನ್ನು ಮರಳಿ ಕರೆತಂದಿದ್ದೇವೆ. ನಾವು ಬಿಕ್ಕಟ್ಟಿನ ನಡುವೆ ಸಿಲುಕಿಕೊಂಡಿದ್ದ ಪಾದ್ರಿಗಳನ್ನು ಮರಳಿ ಕರೆತಂದಿದ್ದೇವೆ. ಕೊರೊನಾ ಸಮಯದಲ್ಲಿ ಭಾರತೀಯರನ್ನು ಪ್ರಪಂಚದ ಪ್ರತಿಯೊಂದು ಭಾಗದಿಂದ ಮರಳಿ ಕರೆತರಲಾಯಿತು. ಏಕೆಂದರೆ ಒಬ್ಬ ಭಾರತೀಯ ತೊಂದರೆಯಲ್ಲಿದ್ದರೂ, ನಮ್ಮ ಸರ್ಕಾರವು ಅವರೊಂದಿಗೆ ಬಲವಾಗಿ ನಿಂತಿದೆ, ಇದು ‘ಮೋದಿಯವರ ಗ್ಯಾರಂಟಿ” ಎಂದರು.

ರಾಷ್ಟ್ರೀಯ ಮಟ್ಟದಲ್ಲಿ ಎಲ್​​ಡಿಎಫ್ ಮತ್ತು ಯುಡಿಎಯು ಒಂದಾಯಿತು. ಕೇರಳದಲ್ಲಿ ಮಾತ್ರ ಅವರು ಹೋರಾಡಿ ಜನರನ್ನು ಕಬಳಿಸುತ್ತಿದ್ದಾರೆ. ತ್ರಿಪುರದಲ್ಲೂ ತಮಿಳುನಾಡಿನಲ್ಲೂ ಅವರು ಹೇಳ ಹೆಸರಿಲ್ಲದಂತಾದರು. ಕಾಂಗ್ರೆಸ್ ಪಕ್ಷದ್ದು ಸೋಲಾರ್ ಹಗರಣ ಆಗಿದ್ದರೆ, ಎಲ್​​​ಡಿಎಫ್​​ನದ್ದು ಚಿನ್ನದ ಹಗರಣ. ಅಕ್ರಮ ರಾಜಕೀಯ ಮತ್ತು ತಾರತಮ್ಯವೇ ಎರಡೂ ಪಕ್ಷಗಳ ಉದ್ದೇಶ ಎಂದು ಮೋದಿ ಕಾಂಗ್ರೆಸ್ ಮತ್ತು ಎಲ್​​​ಡಿಎಫ್ ವಿರುದ್ಧ ಟೀಕಾಪ್ರಹಾರ ಮಾಡಿದ್ದಾರೆ. ಮಲಯಾಳಿಗಳು ಪ್ರಗತಿಪರ ಚಿಂತನೆಯವರು. ಕಾಂಗ್ರೆಸ್ ಮತ್ತು ಎಲ್ ಡಿಎಫ್ ಪುರಾತನ ಕಾಲದ ಚಿಂತನೆಯುಳ್ಳವರು ಎಂದು ಮೋದಿ ಹೇಳಿದ್ದಾರೆ.

ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ರಾಜ್ಯದ ಕ್ರೈಸ್ತ ಸಮುದಾಯವನ್ನು ತಲುಪುವ ನಿಟ್ಟಿನಲ್ಲಿ,ವ್ಯಾಟಿಕನ್ ನಗರದಲ್ಲಿ ಪೋಪ್ ಫ್ರಾನ್ಸಿಸ್ ಅವರೊಂದಿಗಿನ ಭೇಟಿಯನ್ನು ನೆನಪಿಸಿಕೊಂಡರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು