News Karnataka Kannada
Saturday, May 18 2024
ಕೇರಳ

ಕೇರಳದ ಮಾಜಿ ಸ್ಪೀಕರ್‌ ವಕ್ಕಂ ಪುರುಷೋತ್ತಮನ್ ವಿಧಿವಶ

vakkom-purushothaman
Photo Credit :

ತಿರುವನಂತಪುರ: ಹಿರಿಯ ಕಾಂಗ್ರೆಸ್‌ ನಾಯಕ, ಕೇರಳದ ಮಾಜಿ ಸ್ಪೀಕರ್‌ ವಕ್ಕಂ ಪುರುಷೋತ್ತಮನ್ (96) ಅವರು ಕಿಮ್ಸ್‌ ಆಸ್ಪತ್ರೆಯಲ್ಲಿ ಇಂದು ನಿಧನರಾಗಿದ್ದಾರೆ.

ಕ್ಕಂ ಪುರುಷೋತ್ತಮನ್ ಮಿಜೋರಾಂನ ರಾಜ್ಯಪಾಲರಾಗಿ ಹಾಗೂ ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪದ ಲೆಫ್ಟಿನಂಟ್‌ ಗವರ್ನರ್‌ ಆಗಿಯೂ ಸೇವೆ ಸಲ್ಲಿಸಿದ್ದರು.
ಕೇರಳ ಸರ್ಕಾರದಲ್ಲಿ 1971-1977ರವರೆಗೆ, 1980 ರಿಂದ 1981ರವರೆಗೆ ಹಾಗೂ 2004 ರಿಂದ 2006ರವರೆಗೆ ಸಂಪುಟ ಸಚಿವರಾಗಿದ್ದರು. 1982- 1984 ರವರೆಗೆ ಹಾಗೂ 2001-2004ರವರೆಗೆ ಕೇರಳ ವಿಧಾನಸಭಾ ಸ್ಪೀಕರ್ ಆಗಿದ್ದರು.

ಪುರುಷೋತ್ತಮನ್‌ ನಿಧನಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು