News Karnataka Kannada
Saturday, May 04 2024
ಕೇರಳ

ಪಿಎಫ್ಐ ಎಚ್ ಡಿ ಪಿ ಐ ಹಿಂಸಾತ್ಮಕ ಸಂಘಟನೆಗಳು : ಕೇರಳ ಹೈಕೋರ್ಟ್

Untitled 1
Photo Credit :

 ಕೊಚ್ಚಿ: ಪಾಪ್ಯುಲರ್ ಫ್ರಂಟ್ ಆಫ್‌ ಇಂಡಿಯಾ (ಪಿಎಫ್‌ಐ) ಹಾಗೂ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ತೀವ್ರವಾದಿ ಸಂಘಟನೆಗಳು. ಆದರೆ ನಿಷೇಧಿತ ಸಂಘಟನೆಗಳಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ.

‘ಪಿಎಫ್‌ಐ ಹಾಗೂ ಎಸ್‌ಡಿಪಿಐ ಗಂಭೀರ ಹಿಂಸಾಚಾರದಲ್ಲಿ ತೊಡಗಿರುವ ತೀವ್ರವಾದಿ ಸಂಘಟನೆಗಳು ಎಂಬುದರಲ್ಲಿ ಅನುಮಾನವಿಲ್ಲ.

ಅದೇ ರೀತಿ, ಅವುಗಳು ನಿಷೇಧಿತ ಸಂಘಟನೆಗಳಲ್ಲ ಎಂಬುದೂ ನಿಜ’ ಎಂದು ಕೇರಳ ಹೈಕೋರ್ಟ್‌ನ ನ್ಯಾಯಮೂರ್ತಿ ಕೆ. ಹರಿಪಾಲ್ ಅಭಿಪ್ರಾಯಪಟ್ಟಿದ್ದಾರೆ.

ಕಳೆದ ವರ್ಷ ನವೆಂಬರ್‌ನಲ್ಲಿ ಪಾಲಕ್ಕಾಡ್‌ನಲ್ಲಿ ನಡೆದಿದ್ದ ಆರ್‌ಎಸ್‌ಎಸ್ ಕಾರ್ಯಕರ್ತನ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂಬ ಅರ್ಜಿಯ ವಿಚಾರಣೆ ವೇಳೆ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜತೆಗೆ, ಸಿಬಿಐ ತನಿಖೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಯನ್ನು ತಿರಸ್ಕರಿಸಿದ್ದಾರೆ.

ಎಸ್‌ಡಿಪಿಐ 2009ರಲ್ಲಿ ಸ್ಥಾಪನೆಯಾದ ರಾಜಕೀಯ ಪಕ್ಷವಾಗಿದ್ದು, ಇದರ ಅಧೀನ ಸಂಘಟನೆಯಾಗಿದೆ ಪಿಎಫ್‌ಐ.

ನ್ಯಾಯಾಲಯದ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್‌ಡಿಪಿಐ, ಅಭಿಪ್ರಾಯವನ್ನು ಕಡತದಿಂದ ತೆಗದುಹಾಕುವಂತೆ ಮನವಿ ಮಾಡುವುದಾಗಿ ತಿಳಿಸಿದೆ.

‘ಇದು ಬಹಳ ಗಂಭೀರವಾದ ಅಭಿಪ್ರಾಯ. ಯಾವುದೇ ಒಂದು ತನಿಖಾ ಸಂಸ್ಥೆ ಈವರೆಗೆ ಎಸ್‌ಡಿಪಿಐ ವಿರುದ್ಧ ಈ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಯಾವ ಆಧಾರದಲ್ಲಿ ನ್ಯಾಯಾಲಯ ಅಂಥ ಹೇಳಿಕೆ ನೀಡಿದೆ? ನ್ಯಾಯಾಲಯದ ವಿಶ್ಲೇಷಣೆಗಳು ಸಮಂಜಸವಾಗಿರಬೇಕು. ಆದರೆ ಇಲ್ಲಿ ಆ ರೀತಿ ಕಾಣಿಸುತ್ತಿಲ್ಲ’ ಎಂದು ಎಸ್‌ಡಿಪಿಐ ರಾಜ್ಯ ಘಟಕದ ಅಧ್ಯಕ್ಷ ಮೂವಟ್ಟುಪುಳ ಅಶ್ರಫ್ ಮೌಲವಿ ಶುಕ್ರವಾರ ಹೇಳಿದ್ದಾರೆ.

ಎಸ್‌ಡಿಪಿಐ ನಿಲುವನ್ನು ಬೆಂಬಲಿಸಿರುವ ಪಿಎಫ್‌ಐ, ನ್ಯಾಯಾಲಯದ ಅಭಿಪ್ರಾಯ ಸಮರ್ಥನೀಯವಲ್ಲ ಎಂದು ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು