ತಿರುವನಂತಪುರಂ: ಶಾಪಿಂಗ್ ಮಾಲ್ಗಳಿಗೆ ಪಾರ್ಕಿಂಗ್ ಶುಲ್ಕವನ್ನು ಸಂಗ್ರಹಿಸುವ ಹಕ್ಕು ಇಲ್ಲ ಎಂದು ಮೋಲ್ನೋಟಕ್ಕೆ ಸಾಬೀತಾಗುತ್ತದೆ ಎಂದು ಕೇರಳ ಹೈಕೋರ್ಟ್ ಶುಕ್ರವಾರ ಹೇಳಿದೆ.ಇತ್ತೀಚೆಗೆ ಮಾಲ್ ಒಂದರಲ್ಲಿ 20 ರೂ. ವಾಹನ ಪಾರ್ಕಿಂಗ್ ಶುಲ್ಕ ಸಂಗ್ರಹಿಸಿದ್ದನ್ನು ಪ್ರಶ್ನಿಸಿ ಅವರು ಹೈಕೋರ್ಟ್ಗೆ ಮೊರೆ ಹೋಗಿದ್ದರು.
ಅರ್ಜಿದಾರ ಪೌಲಿ ವಡಕ್ಕನ್ ಎಂಬುವರು, ಶಾಪಿಂಗ್ ಮಾಲ್ಗಳು ತಮ್ಮ ಗ್ರಾಹಕರಿಗೆ ಉಚಿತವಾಗಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು.ಅದು ಅವುಗಳ ಜವಾಬ್ದಾರಿಯಾಗಿದೆ. ಇದಕ್ಕಾಗಿ ಶುಲ್ಕ ವಸೂಲು ಮಾಡುವುದು ಕಾನೂನು ಬಾಹಿರ ಎಂದು ವಾದಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ‘ಕಟ್ಟಡ ನಿಯಮಾವಳಿಗಳ ಪ್ರಕಾರ, ಪಾರ್ಕಿಂಗ್ ಸ್ಥಳವು ಕಟ್ಟಡದ ಭಾಗವಾಗಿದೆ. ಕಟ್ಟಡ ನಿರ್ಮಾಣಕ್ಕೆ ಅದು ಅಗತ್ಯ. ಕಟ್ಟಡ ಕಟ್ಟಿದ ನಂತರ ಮಾಲೀಕರು ಪಾರ್ಕಿಂಗ್ ಶುಲ್ಕ ಸಂಗ್ರಹಿಸಬಹುದೇ ಎಂಬುದು ಪ್ರಶ್ನೆ. ಮೇಲ್ನೋಟಕ್ಕೆ ಇದು ಸಾಧ್ಯವಿಲ್ಲ’ ಎಂದು ಕೋರ್ಟ್ ತಿಳಿಸಿತು.