News Karnataka Kannada
Sunday, April 28 2024
ಝಾರ್ಖಂಡ್

ಪ್ರಧಾನಿ ಮೋದಿಯವರ ಬೆಂಗಾವಲು ವಾಹನದ ಮುಂದೆ ಹಾರಿದ ಮಹಿಳೆ

Woman jumps in front of PM Modi's convoy
Photo Credit : News Kannada

ರಾಂಚಿ: ಪ್ರಧಾನಿ ಮೋದಿ ಬುಧವಾರ ರಾಂಚಿಯಲ್ಲಿ ಬಿರ್ಸಾಮುಂಡ ಸ್ಮಾರಕಕ್ಕೆ ತೆರಳುತ್ತಿರುವಾಗ ಅಚಾತುರ್ಯವೊಂದು ಸಂಭವಿಸಿದೆ. ಇದ್ದಕ್ಕಿದ್ದಂತೆ ಮಹಿಳೆಯೊಬ್ಬರು ಪ್ರಧಾನಿ ನರೇಂದ್ರ ಮೋದಿಯವರ ಬೆಂಗಾವಲು ವಾಹನದ ಮುಂದೆ ಹಾರಿದ್ದಾರೆ.

ಚಾಲಕ ಏಕಾಏಕಿ ಬ್ರೇಕ್​ ಹಾಕಿ ಅಪಘಾತವನ್ನು ತಪ್ಪಿಸಿದ್ದಾರೆ, ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ರಸ್ತೆಬದಿಯಲ್ಲಿ ಪ್ರಧಾನಿ ಬರುವುದನ್ನೇ ಕಾಯುತ್ತಾ ನಿಂತಿದ್ದ ಮಹಿಳೆ ಕಾರು ಕಂಡಾಕ್ಷಣ ಎದುರು ಜಿಗಿದಿದ್ದಾರೆ. ತಕ್ಷಣ ಭದ್ರತಾ ಸಿಬ್ಬಂದಿ ಆಕೆಯನ್ನು ತಡೆದಿದ್ದಾರೆ. ಮಹಿಳೆಯು ಬಳಿಕ ಪ್ರಧಾನಿ ಮೋದಿ ಬೆಂಗಾವಲು ವಾಹನ ಮುಂದೆ ಚಲಿಸಿತು.

ತನ್ನ ಕೌಟುಂಬಿಕ ಸಮಸ್ಯೆಗಳನ್ನು ಪ್ರಧಾನಿ ಮೋದಿ ಬಳಿ ಹೇಳಿ ಕೊಳ್ಳಲು ಈ ರೀತಿಯಾಗಿ ನಡೆದುಕೊಂಡಿದ್ದಾರೆ ಎನ್ನಲಾಗ್ತಿದೆ. ಸದ್ಯ ಪೊಲೀಸರು ಮಹಿಳೆಯನ್ನು ವಿಚಾರಣೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು