ಜಾರ್ಖಂಡ್: ಪತಿ ಜೀನ್ಸ್ ಧರಿಸಲು ಬಿಡಲಿಲ್ಲವೆಂದು ಪತ್ನಿ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.
ಈ ಘಟನೆ ಶನಿವಾರದಂದು ಜೋರ್ಬಿತಾ ಎಂಬ ಗ್ರಾಮದಲ್ಲಿ ನಡೆದಿದ್ದು, ಪುಷ್ಪಾ ಎಂಬಾಕೆ ಗೋಪಾಲ್ ಪುರ ಗ್ರಾಮದಲ್ಲಿ ನಡೆಯುತ್ತಿದ್ದ ಮೇಳವನ್ನು ವೀಕ್ಷಿಸಲು ಜೀನ್ಸ್ ಧರಿಸಿಕೊಂಡು ತೆರಳಿದ್ದಳು. ಪತಿ ಆಕ್ಷೇಪಿಸಿದಕ್ಕೆ ಪತಿ – ಪತ್ನಿ ನಡುವೆ ವಾಗ್ವಾದ ನಡೆದು, ಪುಷ್ಪಾ ಚಾಕು ತೆಗೆದುಕೊಂಡು ಹೊತ್ತಿಗೆ ಇರಿದಿದ್ದಾಳೆ. ಕೂಡಲೇ ಆತನ ಪೋಷಕರು ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಪತಿಯ ತಂದೆ ತನ್ನ ಸೊಸೆ ಪುಷ್ಪಾ ವಿರುದ್ಧ ಪೊಲೀಸ್ ಠಾಣೆಯಲ್ಲಿ ಈಗ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಈ ಘಟನೆ ಜಾಮ್ತಾರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.