ಪಾಕ್: ಬಾಬರ್ ಅಜಂ ನಾಯಕತ್ವದಿಂದ ಕೆಳಗಿಳಿದ ಬೆನ್ನಲ್ಲೇ ಪಾಕಿಸ್ತಾನ ತಂಡಕ್ಕೆ ನೂತನ ಸಾರಥಿಯ ಆಯ್ಕೆ ಆಗಿದೆ. ಟಿ-20 ಹಾಗೂ ಟೆಸ್ಟ್ ಫಾರ್ಮ್ಯಾಟ್ಗೆ ಹೊಸ ಸಾರಥಿಯ ಆಯ್ಕೆ ಆಗಿದೆ.
ಶಾಹೀನ್ ಅಫ್ರಿದಿಯನ್ನು ಟಿ-20ಗೆ ನಾಯಕರನ್ನಾಗಿ ನೇಮಕ ಮಾಡಿದ್ರೆ, ಶನ್ ಮಸೂದ್ರನ್ನು ಟೆಸ್ಟ್ ತಂಡಕ್ಕೆ ಕ್ಯಾಪ್ಟನ್ ಆಗಿ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ (ಪಿಸಿಬಿ) ನೇಮಿಸಿದೆ. ನೂತನ ನಾಯಕರ ಆಯ್ಕೆ ಬೆನ್ನಲ್ಲೇ ಪಿಸಿಬಿ ಟ್ವಿಟರ್ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ.
ಪಿಸಿಬಿ ಮುಖ್ಯಸ್ಥ ಝಕಾ ಅಶ್ರಫ್, ಮೊಹಮ್ಮದ್ ಹಫೀಜ್, ಯೂನಿಸ್ ಖಾನ್, ಸೋಹಿಲ್ ತನ್ವರ್, ವಹಾಬ್ ರಿಯಾಜ್, ಶಾಹೀದ್ ಅಫ್ರಿದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಶಹೀನ್ ಅಫ್ರಿದಿಯನ್ನು ಕ್ಯಾಪ್ಟನ್ ಆಗಿ ನೇಮಕ ಮಾಡಿರೋದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.
23 ವರ್ಷದ ಶಹೀನ್ ಅಫ್ರಿದಿಗೆ ಟಿ-20ಯಲ್ಲಿ ಮಾತ್ರ ಅನುಭವ ಇದೆ. ಪಾಕಿಸ್ತಾನ ತಂಡದ ಬೌಲಿಂಗ್ ವಿಭಾಗದ ಬೆನ್ನೆಲಬು ಶಾಹೀನ್ ಅಫ್ರಿದಿ ಆಗಿದ್ದಾರೆ.
Presenting our captains 🇵🇰@shani_official has been appointed Test captain while @iShaheenAfridi will lead the T20I side. pic.twitter.com/wPSebUB60m
— Pakistan Cricket (@TheRealPCB) November 15, 2023