ಜಾರ್ಖಂಡ್: ಶಾಲಾ ಬಾಲಕಿಯನ್ನು ಬಾಲಕನೊಬ್ಬ ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಪೊಲೀಸರಿಗೆ ಸೂಚಿಸಿದ್ದಾರೆ.
ಹಲ್ಲೆಗೊಳಗಾದ ಬಾಲಕಿ ಪಾಕುರ್ ಜಿಲ್ಲೆಯ ಶಾಲೆಯೊಂದರ ಬುಡಕಟ್ಟು ವಿದ್ಯಾರ್ಥಿ ಎಂದು ವರದಿಯಾಗಿದೆ.
ವಿಡಿಯೋದಲ್ಲಿ ಬಾಲಕ ಬಾಲಕಿಯನ್ನು ಪದೇ ಪದೇ ಒದೆಯುತ್ತಿರುವ ದೃಶ್ಯವಿದೆ. ಬಾಲಕಿ ಸಮವಸ್ತ್ರದಲ್ಲಿದ್ದು ಶಾಲಾ ಬ್ಯಾಗ್ ಹೊತ್ತಿದ್ದಾಳೆ. ಬಾಲಕಿ ಮತ್ತು ಆರೋಪಿ ಇಬ್ಬರ ಕುರಿತಾದ ವೀಡಿಯೊ ಮತ್ತು ವಿವರಗಳನ್ನು ಪೋಸ್ಟ್ ಮಾಡಿರುವ ಟ್ವೀಟ್ಗೆ ಸಿಎಂ ಸೊರೆನ್ ಇಂದು ಪ್ರತಿಕ್ರಿಯಿಸಿದ್ದಾರೆ.
ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಮೇಲ್ನೋಟಕ್ಕೆ ಇದು ಪ್ರೇಮ ಪ್ರಕರಣ ಎಂದು ತಿಳಿದು ಬಂದಿರುವುದಾಗಿ ವರದಿಯಾಗಿದೆ. ಪೊಲೀಸರು ತಕ್ಷಣ ಈ ವಿಷಯದ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದು, ಆರೋಪಿ 9 ನೇ ತರಗತಿಯ ವಿದ್ಯಾರ್ಥಿ ದುಮ್ಕಾ ಜಿಲ್ಲೆಯ ನಿವಾಸಿ ಎಂದು ತಿಳಿದುಬಂದಿದೆ.