News Karnataka Kannada
Monday, May 06 2024
ಜಮ್ಮು-ಕಾಶ್ಮೀರ

ಕಾಶ್ಮೀರದಲ್ಲಿ ಉಗ್ರರಿಂದ ಪೊಲೀಸ್ ಪೇದೆ ಹತ್ಯೆ

Terrorist Killed 23082021
Photo Credit :

ಶ್ರೀನಗರ: ಕಾಶ್ಮೀರದಲ್ಲಿ ಭಯೋತ್ಪಾದಕರು ಪೊಲೀಸ್ ಪೇದೆಯನ್ನು ಹತ್ಯೆ ಮಾಡಿರುವ ಘಟನೆ ಭಾನುವಾರ ವರದಿಯಾಗಿದೆ.ಬತಾಮಲೂ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮೃತ ಪೊಲೀಸ್ ಪೇದೆಯನ್ನು ತೌಸೀಫ್ ಅಹ್ಮದ್ ಎಂದು ಗುರುತಿಸಲಾಗಿದೆ. “ರಾತ್ರಿ 8 ಗಂಟೆ ವೇಳೆಗೆ ಭಯೋತ್ಪಾದಕರು ಜೆಕೆಪಿ ಪೇದೆ ತೌಸೀಫ್ ಅಹ್ಮದ್ ಮೇಲೆ ಆತನ ನಿವಾಸದ ಬಳಿ ಗುಂಡಿನ ದಾಳಿ ನಡೆಸಿದ್ದಾರೆ” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡ ಪೊಲೀಸ್ ಅಧಿಕಾರಿಯನ್ನು ಎಸ್‌ಎಂಹೆಚ್‌ಎಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆ ವೇಳೆಗೆ ಆಗಲೇ ಪೊಲೀಸ್ ಪೇದೆ ಸಾವನ್ನಪ್ಪಿದ್ದರು.

ಉಗ್ರರಿಗಾಗಿ ಆ ಪ್ರದೇಶದಲ್ಲಿ ಶೋಧಕಾರ್ಯಾಚರಣೆ ನಡೆಯುತ್ತಿದೆ. ಇದೇ ವೇಳೆ ಎನ್ ಸಿ ಈ ದಾಳಿಯನ್ನು ಖಂಡಿಸಿದೆ. 29 ವರ್ಷದ ಪೊಲೀಸ್ ಪೇದೆಯ ಮೇಲೆ ನಡೆದಿರುವ ದಾಳಿಯನ್ನು ಖಂಡಿಸುವುದಾಗಿ ತಿಳಿಸಿದೆ. ಮೃತ ಪೊಲೀಸ್ ಪೇದೆಗೆ ಅಲ್ಲಾ ಜನ್ನತ್ ಕರುಣಿಸಲಿ ಎಂದು ಎನ್ ಸಿ ಸಂತಾಪ ಸೂಚಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು