ಜಮ್ಮುಕಾಶ್ಮೀರ : ಜಮ್ಮುಕಾಶ್ಮೀರದ ಅನಂತನಾಗ್ ಮತ್ತು ಕುಲ್ಗಾಮದಲ್ಲಿ ಇಂದು ಭಾರತೀಯ ಸೇನೆಯ ಎನ್ ಕೌಂಟರ್ ನಲ್ಲಿ ನಿಷೇಧಿತ ಸಂಘಟನೆ ಜೆಇಎಂನ 6 ಭಯೋತ್ಪಾದಕರು ಹತ್ಯೆಯಾಗಿದ್ದಾರೆ.
ಭಾರತೀಯ ಸೇನೆ ನಡೆಸಿದ ಎರಡು ಪ್ರತ್ಯೇಕ ಎನ್ ಕೌಂಟರ್ ಗಳಲ್ಲಿ (ಅನಂತನಾಗ್ ಮತ್ತು ಕುಲ್ಗಾಮ್) 6 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದ್ದು, ಹತ್ಯೆಗೀಡಾದ ಭಯೋತ್ಪಾದಕರಲ್ಲಿ ಇಬ್ಬರು ಪಾಕಿಸ್ತಾನಿ ಮತ್ತು ಇಬ್ಬರು ಸ್ಥಳೀಯ ಭಯೋತ್ಪಾದಕರೆಂದು ಗುರುತಿಸಲಾಗಿದೆ.
ಇತರ 2 ಭಯೋತ್ಪಾದಕರ ನ್ನು ಗುರುತಿಸಲಾಗುತ್ತಿದೆ ಕಾಶ್ಮೀರ ಐಜಿಪಿ ಮಾಹಿತಿ ನೀಡಿದ್ದಾರೆ.