News Karnataka Kannada
Monday, May 06 2024
ದೇಶ

4 ಗಂಟೆಗಳ ಕಾಲ ಅವರಿಬ್ಬರು ವಿಮಾನದೊಳಗೆ ಹೀಗೆ ಇದ್ರು: ಫೋಟೊ ನೋಡಿ

Flight
Photo Credit :

ದೆಹಲಿ: ವಿಮಾನದೊಳಗೆ ಆರಾಮದಾಯಕ, ಸುಖಕರ ಪ್ರಯಾಣ ಮಾಡಲೆಂದು ಬಯಸುವವರ ಸಂಖ್ಯೆಯೇ ಹೆಚ್ಚು. ಎಲ್ಲದಕ್ಕಿಂತ ಮುಖ್ಯವಾಗಿ ತಾವು ಪ್ರಯಾಣಿಸುವಾಗ ತಮ್ಮ ಸಹ ಪ್ರಯಾಣಿಕರು ತೊಂದರೆ ಮಾಡದಿದ್ದರೆ ಸಾಕಪ್ಪ ಎಂದು ಯೋಚಿಸುವವರಿಗೆ ಈ ಘಟನೆ ತೀರ ವಿಚಿತ್ರ ಎನಿಸಬಹುದು.

ಹೌದು. . ಇಲ್ಲಿನ ವಿಮಾನದಲ್ಲಿ ಪ್ರೇಮಿಗಳಿಬ್ಬರು ತಮಗೆ ನೀಡಿದಂತ ಆಸನದಲ್ಲಿ ಎಲ್ಲರಂತೆ ಕುಳಿತುಕೊಳ್ಳದೆ, ಮಲಗಿಕೊಂಡು ಲವ್ವಿಡವ್ವಿ ನಡೆಸಿರೋದು ಸಹ ಪ್ರಯಾಣಿಕನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವಿಮಾನದಲ್ಲಿ ಪ್ರಯಾಣಿಸುವಾಗ ತಮ್ಮ ಖಾಸಗಿ ಕ್ಷಣವನ್ನು ಸಾರ್ವಜನಿಕ ಸ್ಥಳದಲ್ಲಿ ಆನಂದಿಸುತ್ತಿರುವ ದಂಪತಿಗಳ ದೃಶ್ಯವನ್ನು ಸಹ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್​ನಲ್ಲಿ ಸರೆಹಿಡಿದು ಅದನ್ನು ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಕ್ಷಣಮಾತ್ರದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಜೋಡಿಗಳಿಗೆ ಹಿಗ್ಗಾಮುಗ್ಗಾ ಕ್ಲಾಸ್​ ತೆಗೆದುಕೊಂಡಿದ್ದಾರೆ.

ನಾಲ್ಕು ಗಂಟೆಗಳ ಕಾಲ ಇವರಿಬ್ಬರ ಲವ್ವಿಡವ್ವಿ ಹೀಗೆ ನಡೆಯಿತು. ಅದನ್ನು ನೋಡಿ ನಮಗೆ ತೀವ್ರ ಮುಜುಗರ ಉಂಟಾಯಿತು ಎಂದು ಹೇಳಿದ್ದಾರೆ. ದೃಶ್ಯದಲ್ಲಿ ಜೋಡಿಯ ಸೀಟಿನ ಹಿಂಬದಿ ಸೀಟಿನಲ್ಲಿ ಕುಳಿತ ಮಹಿಳೆಯೊಬ್ಬರು ಕಿಟಕಿಗೆ ತನ್ನ ತಲೆ ಒರಗಿಸಿ, ಆಯಾಗಿ ನಿದ್ರಿಸುತ್ತಿರುವುದು ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದೆ. ಸದ್ಯ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಸಕತ್‌ ಸದ್ದು ಮಾಡುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು